Select Your Language

Notifications

webdunia
webdunia
webdunia
webdunia

BBK10: ಡ್ರೋಣ್ ಪ್ರತಾಪ್ ವಿರುದ್ಧ 2.5 ಕೋಟಿ ರೂ. ಮಾನನಷ್ಟ ಮೊಕದ್ದಮೆ

Drone Pratap
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸ್ಪರ್ಧಿಯಾಗಿರುವ ಡ್ರೋಣ್ ಪ್ರತಾಪ್ ಮೇಲೆ 2.5 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಾಗಿದೆ.

ಬಿಗ್ ಬಾಸ್ ಮನೆಯಲ್ಲಿದ್ದಾಗ ಡ್ರೋಣ್ ಪ್ರತಾಪ್ ಒಂದಿಲ್ಲೊಂದು ವಿವಾದಕ್ಕೆ ಗುರಿಯಾಗುತ್ತಿದ್ದಾರೆ. ಇದೀಗ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೊವಿಡ್ ಸಂದರ್ಭದಲ್ಲಿ ನನ್ನನ್ನು ಬಿಬಿಎಂಪಿ ಅಧಿಕಾರಿಗಳು ಕೆಟ್ಟದಾಗಿ ನಡೆಸಿಕೊಂಡರು ಎಂದು ಪ್ರತಾಪ್ ಹೇಳಿದ್ದರು. ಅವರ ಈ ಹೇಳಿಕೆ ಈಗ ಅವರಿಗೇ ಮುಳುವಾಗಿದೆ. ಬಿಬಿಎಂಪಿ ಅಧಿಕಾರಿ ಪ್ರಯಾಗ್ ಎಂಬವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಪ್ರಯಾಗ್ ಎಂಬವರು 50 ಲಕ್ಷ ರೂ. ಮತ್ತು ಇನ್ನೊಬ್ಬ ಅಧಿಕಾರಿ 2 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ವಿಚಾರದ ಬಗ್ಗೆ ಇಂದು ಕೋರ್ಟ್ ನಲ್ಲಿ ಆದೇಶ ಹೊರಬರುವ ಸಾಧ್ಯತೆಯಿದೆ. ಹೀಗಾಗಿ ಬಿಗ್ ಬಾಸ್ ನಿಂದ ಹೊರಬಂದ ಮೇಲೆ ಪ್ರತಾಪ್ ಗೆ ಸಾಕಷ್ಟು ಸಮಸ್ಯೆ ಎದುರಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

BBK10: ವಾರದ ಮಧ್ಯೆಯೇ ಎಲಿಮಿನೇಟ್ ಆದ ತನಿಷಾ