ರಂಜನಿ ರಾಘವನ್ ಹುಡುಗನ ಪರಿಚಯಿಸಿದ್ದಕ್ಕೆ ಅಮ್ಮಮ್ಮನ ಸಂಭ್ರಮ ಹೇಳತೀರದು

Krishnaveni K
ಶುಕ್ರವಾರ, 30 ಆಗಸ್ಟ್ 2024 (16:57 IST)
ಬೆಂಗಳೂರು: ನಿನ್ನೆಯಷ್ಟೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಾವು ಮದುವೆಯಾಗಲಿರುವ ಹುಡುಗನ ಜೊತೆಗಿರುವ ಫೋಟೋ ಪ್ರಕಟಿಸಿದ್ದ ನಟಿ ರಂಜನಿ ರಾಘವನ್ ಎಲ್ಲರಿಗೂ ಸರ್ಪೈಸ್ ಕೊಟ್ಟಿದ್ದರು.

ಒಂದೆಡೆ ರಂಜನಿ ತಮ್ಮ ಹುಡುಗನ ಫೋಟೋ ಪ್ರಕಟಿಸುತ್ತಿದ್ದಂತೇ ಇತ್ತ ಅಮ್ಮಮ್ಮ ಖ್ಯಾತಿಯ ನಟಿ ಚಿತ್ಕಲಾ ಬಿರಾದರ್ ಸಂಭ್ರಮ ಮುಗಿಲು ಮುಟ್ಟಿದೆ. ಕನ್ನಡತಿ ಧಾರವಾಹಿಯಲ್ಲಿ ಅಮ್ಮಮ್ಮ ಮತ್ತು ಭುವಿ ಟೀಚರ್ ಜೋಡಿ ಜನಪ್ರಿಯವಾಗಿತ್ತು. ಇವರಿಬ್ಬರೂ ನಿಜ ಜೀವನದಲ್ಲೂ ಅಷ್ಟೇ ಹತ್ತಿರವಾಗಿದ್ದಾರೆ.

ನಟಿ ಚಿತ್ಕಲಾ ಬಿರಾದರ್ ಅಮ್ಮಮ್ಮ ಪಾತ್ರ ಮಾಡುತ್ತಿದ್ದರು. ಇಂದಿಗೂ ಜನ ಅವರನ್ನು ಅಮ್ಮಮ್ಮ ಎಂದೇ ಪ್ರೀತಿಯಿಂದ ಗುರುತಿಸುತ್ತಾರೆ. ಇದೀಗ ಭುವಿ ಟೀಚರ್ ಮದುವೆಯಾಗುತ್ತಿರುವ ಸುದ್ದಿ ಅಮ್ಮಮ್ಮನ ಖುಷಿ ಹೆಚ್ಚಾಗಿಸಿದೆ. ತಮ್ಮ ಸಂತೋಷವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಈ ಒಂದು ಫೋಟೋಕ್ಕಾಗಿ ಅದೆಷ್ಟು ದಿನದಿಂದ ಕಾಯುತ್ತಿದ್ದೆ ಹುಡುಗೀ. ಅಂತೂ ಇಂತೂ ಬಂತು. ನಿಮಗಿಬ್ಬರಿಗೂ ಶುಭವಾಗಲಿ’ ಎಂದು ಅಮ್ಮಮ್ಮ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿಕೊಂಡು ಖುಷಿಪಟ್ಟಿದ್ದಾರೆ. ಇದಕ್ಕೆ ರಂಜನಿ ಕೂಡಾ ಪ್ರತಿಕ್ರಿಯಿಸಿದ್ದು ಅಮ್ಮಮ್ಮನ ಪ್ರೀತಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಂಧನಕ್ಕೊಳಗಾದ ನೀಲಿ ತಾರೆ, ಓನ್ಲಿ ಫ್ಯಾನ್ಸ್ ಸ್ಟಾರ್ ಬೋನಿ, ಆರೋಪ ಸಾಬೀತಾದಲ್ಲಿ 15ವರ್ಷ ಜೈಲೂಟ

ಮಗುವಿನ ಆಗಮನದ ಖುಷಿಯಲ್ಲಿ ಪ್ಯಾಟೆ ಹುಡುಗಿ ಹಳ್ಳಿ ಲೈಫ್‌ನ ಸುಷ್ಮಾ ರಾಜ್‌

ರಿಷಬ್ ಕಾಲ ಮೇಲೆ ಮಲಗಿದ್ದು ದೈವವಲ್ಲ ಬದಲಾಗಿ ನರ್ತಕ, ಭಾರೀ ಟೀಕೆ

ಅಪ್ಪ ಇಲ್ಲದಿದ್ದರು, 90ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಧರ್ಮೇಂದ್ರ ಮಕ್ಕಳು

ದಿಲೀಪ್ ಪರ ತೀರ್ಪು ಹೊರಬೀಳುತ್ತಿದ್ದ ಹಾಗೇ ವಾವ್ಹ್‌ ಜಸ್ಟ್‌ ವಾವ್ಹ್‌ ಎಂದ ಗಾಯಕಿ

ಮುಂದಿನ ಸುದ್ದಿ
Show comments