Publish Date: Tue, 16 Jul 2019 (09:30 IST)
Updated Date: Tue, 16 Jul 2019 (09:33 IST)
ಬೆಂಗಳೂರು: ಕನ್ನಡ ಮತ್ತು ತೆಲುಗು ಧಾರವಾಹಿಗಳಲ್ಲಿ ಅಭಿನಯಿಸಿ ಜನಪ್ರಿಯ ತಾರೆ ಎನಿಸಿಕೊಂಡಿರುವ ನಟಿ ಐಶ್ವರ್ಯಾ ಪಿಸ್ಸೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯ ‘ಸರ್ವಮಂಗಲ ಮಾಂಗಲ್ಯೇ’ ಕನ್ನಡ ಧಾರವಾಹಿ ತೆಲುಗಿನ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ಐಶ್ವರ್ಯಾ ತಮ್ಮ ಬಹುಕಾಲದ ಗೆಳೆಯ ಹರಿ ವಿನಯ್ ಜತೆ ಸಪ್ತಪದಿ ತುಳಿದಿದ್ದಾರೆ.
ಈ ವಿವಾಹಕ್ಕೆ ಹಲವು ನಟ-ನಟಿಯರು, ಕುಟುಂಬ, ಸ್ನೇಹಿತರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.