Select Your Language

Notifications

webdunia
webdunia
webdunia
webdunia

ಭಾರತಕ್ಕೆ ಬಂದಿಳಿದ ಟೋಕಿಯೋ ಒಲಿಂಪಿಕ್ಸ್ ವೀರರು

webdunia
ನವದೆಹಲಿ , ಸೋಮವಾರ, 9 ಆಗಸ್ಟ್ 2021 (16:53 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭರ್ಜರಿ ಪ್ರದರ್ಶನವಿತ್ತು ಪದಕದೊಂದಿಗೆ ಭಾರತದ ಕ್ರೀಡಾಳುಗಳು ಸ್ವದೇಶಕ್ಕೆ ಮರಳಿದ್ದಾರೆ.


ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದ ಸದಸ್ಯರು, ಜ್ವಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ, ಬಾಕ್ಸರ್ ಲೊವ್ಲಿನಾ, ಕುಸ್ತಿಪಟು ಭಜರಂಗ್ ಪೂನಿಯಾ, ರವಿ ದಹಿಯಾ ಒಟ್ಟಾಗಿ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಈ ವೇಳೆ ಅವರನ್ನು ಸ್ವಾಗತಿಸಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ವಿಮಾನ ನಿಲ್ದಾಣದ ಹೊರಗೆ ಕಾದು ನಿಂತಿದ್ದರು. ಜೈಕಾರಗಳ ನಡುವೆ ಭಾರತದ ಪದಕ ಹೀರೋಗಳು ಸ್ವದೇಶಕ್ಕೆ ಮರಳಿದ್ದಾರೆ.

ಎಲ್ಲರೂ ಅಶೋಕ ಹೋಟೆಲ್ ಗೆ ತೆರಳಿದ್ದು, ಅಲ್ಲಿ ಇತರ ಪದಕ ವಿಜೇತರಾದ ಪಿ.ವಿ. ಸಿಂಧು, ಮೀರಾಬಾಯಿ ಚಾನು ಕೂಡಾ ಒಟ್ಟು ಸೇರಲಿದ್ದಾರೆ. ಬಳಿಕ ಎಲ್ಲಾ ಪದಕ ವಿಜೇತರಿಗೂ ಸನ್ಮಾನ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೋಕಿಯೋದಲ್ಲಿ ನಿರೀಕ್ಷೆ ಹುಸಿ ಮಾಡಿದ ಭಾರತೀಯ ತಾರೆಯರು