Select Your Language

Notifications

webdunia
webdunia
webdunia
webdunia

ಕೊಹ್ಲಿಯ ಮತ್ತೊಂದು ರೂಪ ಮೊಹಮ್ಮದ್ ಸಿರಾಜ್

ವಿರಾಟ್ ಕೊಹ್ಲಿ
ಟ್ರೆಂಟ್ ಬ್ರಿಡ್ಜ್: ವಿರಾಟ್ ಕೊಹ್ಲಿ ಎಂದರೆ ಮೈದಾನದಲ್ಲಿ ಸದಾ ಎದುರಾಳಿಗಳನ್ನು ಕೆಣಕುವುದಕ್ಕೆ ಫೇಮಸ್. ಈಗ ಟೀಂ ಇಂಡಿಯಾದಲ್ಲಿ ಅವರಿಗೆ ಮತ್ತೊಬ್ಬ ಪ್ರತಿಸ್ಪರ್ಧಿ ಸಿಕ್ಕಿದ್ದಾರೆ.


ಅವರೇ ಯುವ ವೇಗಿ ಮೊಹಮ್ಮದ್ ಸಿರಾಜ್. ಟೀಂ ಇಂಡಿಯಾ ಯುವ ವೇಗಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಎದುರಾಳಿಗಳ ಜೊತೆ ಬೌಲಿಂಗ್ ಜೊತೆಗೆ ಸ್ಲೆಡ್ಜಿಂಗ್ ಮಾಡುವುದರಲ್ಲೂ ಮಿಂಚಿದ್ದಾರೆ.

ಕೊಹ್ಲಿಯಂತೇ ಆಕ್ರಮಣಕಾರಿ ವರ್ತನೆ ತೋರುವ ಸಿರಾಜ್ ಎರಡೆರಡು ಬಾರಿ ಎದುರಾಳಿ ಆಟಗಾರರೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ. ಒಮ್ಮೆ ಜೇಮ್ಸ್ ಆಂಡರ್ಸನ್ ಜೊತೆ ಮಾತಿನ ಚಕಮಕಿ ನಡೆಸಿ ಭುಜಕ್ಕೆ ಭುಜ ತಾಗಿಸುವ ಮಟ್ಟಕ್ಕೆ ಹೋದರೆ ಮತ್ತೊಮ್ಮೆ ಬೌಲಿಂಗ್ ಮಾಡುವಾಗ ಎದುರಾಳಿ ಬ್ಯಾಟ್ಸ್ ಮನ್ ಸ್ಯಾಮ್ ಕ್ಯುರೇನ್ ಜೊತೆಗೆ ಮಾತಿನ ಚಕಮಕಿ ನಡೆಸಿದರು. ವಿಶೇಷವೆಂದರೆ ಈ ವೇಳೆ ಕೊಹ್ಲಿ ಅವರನ್ನು ಸಮಾಧಾನ ಪಡಿಸಬೇಕಾಯಿತು. ಈ ಮೂಲಕ ವಿಕೆಟ್ ಬಿದ್ದಾಗಲೂ, ಉತ್ತಮ ಬೌಲಿಂಗ್ ನಡೆಸಿದಾಗಲೂ ಅವರು ಆಕ್ರಮಣಕಾರಿಯಾಗಿ ವರ್ತಿಸುವುದನ್ನು ನೋಡಿದರೆ ಕೊಹ್ಲಿಗೆ ಮತ್ತೊಬ್ಬ ಸ್ಪರ್ಧಿ ಎನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಜಾತಿ ನಿಂದನೆಗೊಳಗಾಗಿದ್ದ ಹಾಕಿ ಪ್ಲೇಯರ್ ವಂದನಾಗೆ ಗೌರವ ನೀಡಿದ ಉತ್ತರಾಖಂಡ ಸರ್ಕಾರ