ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನದಾಟ ಮಳೆಯಿಂದಾಗಿ ಇನ್ನೂ ಆರಂಭವಾಗಿಲ್ಲ.
209 ರನ್ ಗಳ ಗೆಲುವಿನ ಗುರಿ ಬೆನ್ನತ್ತಿರುವ ಭಾರತ 1 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿ ನಿನ್ನೆಯ ದಿನದಾಟ ಮುಗಿಸಿತ್ತು. ಇಂದು ಪೂರ್ತಿ ದಿನದ ಆಟವಾಗಿದ್ದರೆ ಭಾರತ ಸುಲಭವಾಗಿ ಗೆಲ್ಲುತ್ತಿತ್ತು.
ಆದರೆ ಟ್ರೆಂಟ್ ಬ್ರಿಡ್ಜ್ ಅಂಗಣದಲ್ಲಿ ಇಂದು ಬೆಳಗ್ಗಿನಿಂದಲೇ ಭಾರೀ ಮಳೆಯಾಗುತ್ತಿದ್ದು, ದಿನದಾಟ ಇನ್ನೂ ಆರಂಭವಾಗಿಲ್ಲ. ಇದರಿಂದಾಗಿ ಭಾರತದ ಗೆಲುವಿನ ಹಾದಿಗೆ ಅಡ್ಡಿ ಎದುರಾಗಿದೆ. ಇನ್ನು, ಮಳೆ ನಿಂತು ಇಂದಿನ ದಿನದಲ್ಲಿ ಎಷ್ಟು ಓವರ್ ಆಡಲು ಸಾಧ‍್ಯವಾಗುತ್ತದೋ ಎಂದು ಕಾದು ನೋಡಬೇಕಿದೆ.