Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ಗೆ ಆರಂಭಿಕ ಆಘಾತ ಕೊಟ್ಟ ಟೀಂ ಇಂಡಿಯಾ ವೇಗಿಗಳು

ಇಂಗ್ಲೆಂಡ್ ಗೆ ಆರಂಭಿಕ ಆಘಾತ ಕೊಟ್ಟ ಟೀಂ ಇಂಡಿಯಾ ವೇಗಿಗಳು
ಟ್ರೆಂಟ್ ಬ್ರಿಡ್ಜ್ , ಶನಿವಾರ, 7 ಆಗಸ್ಟ್ 2021 (17:00 IST)
ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಇಂಗ್ಲೆಂಡ್ ನ ಆರಂಭಿಕ ಎರಡು ವಿಕೆಟ್ ಗಳನ್ನು ಟೀಂ ಇಂಡಿಯಾ ವೇಗಿಗಳು ಕಬಳಿಸಿದ್ದಾರೆ.


95 ರನ್ ಗಳ ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಇತ್ತೀಚೆಗಿನ ವರದಿ ಬಂದಾಗ 2 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿತ್ತು. 34 ರನ್ ಗಳಿಸಿರುವ ನಾಯಕ ಜೋ ರೂಟ್, 23 ರನ್ ಗಳಿಸಿರುವ ಡೊಮಿನಿಕ್ ಸಿಬ್ಲೆ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಭಾರತದ ಪರ ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 1 ವಿಕೆಟ್ ಕಬಳಿಸಿದ್ದಾರೆ. ಇಂದಿನ ದಿನವಿಡೀ ಆಟ ಮುಂದುವರಿದು ಭಾರತ ಬೇಗನೇ ಎದುರಾಳಿಗಳನ್ನು ನಿಯಂತ್ರಿಸಿದರೆ ಪಂದ್ಯದಲ್ಲಿ ಫಲಿತಾಂಶ ನಿರೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕಂಚಿನ ಪದಕ ಗೆದ್ದುಕೊಂಡ ಕುಸ್ತಿಪಟು ಭಜರಂಗ್ ಪೂನಿಯಾ