ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಮತ್ತೊಂದು ಪದಕ ಭಾರತದ ಪಾಲಿಗೆ ಒಲಿದು ಬಂದಿದೆ. 65 ಕೆ.ಜಿ. ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಭಾರತದ ಭಜರಂಗ್ ಪೂನಿಯಾ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ನಿನ್ನೆ ಸೆಮಿಫೈನಲ್ ನಲ್ಲಿ ಸೋತಿದ್ದ ಪೂನಿಯಾ ಇಂದು ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಡೌಲೆಟ್ ನಿಯಾಝ್ ಬೆಕವ್ ವಿರುದ್ಧ 8-0 ಅಂಕಗಳಿಂದ ಗೆಲುವು ಸಾಧಿಸಿದ್ದಾರೆ.
ಇದರೊಂದಿಗೆ ಭಾರತಕ್ಕೆ ಆರನೇ ಪದಕ ಸಿಕ್ಕಂತಾಗಿದೆ. ಒಟ್ಟಾರೆ ಈ ಒಲಿಂಪಿಕ್ಸ್ ನಲ್ಲಿ ಇದು ನಾಲ್ಕನೇ ಕಂಚಿನ ಪದಕವಾಗಿದೆ.