Publish Date: Sat, 07 Aug 2021 (10:40 IST)
Updated Date: Sat, 07 Aug 2021 (10:42 IST)
ಟೋಕಿಯೋ: ಭಾರತ ಗಾಲ್ಫ್ ಕ್ರೀಡೆಯಲ್ಲಿ ಒಲಿಂಪಿಕ್ಸ್ ನಲ್ಲಿ ಇದುವರೆಗೆ ಮಾಡದ ಸಾಧನೆಯನ್ನು ಮಾಡಿರುವ ಮಹಿಳಾ ಆಟಗಾರ್ತಿ ಅದಿತಿ ಅಶೋಕ್ ಕೂದಲೆಳೆಯಲ್ಲಿ ಕಂಚಿನ ಪದಕ ತಪ್ಪಿಸಿಕೊಂಡಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅದಿತಿ ಮೂರನೇ ಸುತ್ತಿನ ಮುಕ್ತಾಯಕ್ಕೆ ಎರಡನೇ ಸ್ಥಾನದಲ್ಲಿದ್ದು, ಬೆಳ್ಳಿ ಪದಕದ ಭರವಸೆ ಮೂಡಿಸಿದ್ದರು. ಆದರೆ ಅಂತಿಮವಾಗಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಇದರೊಂದಿಗೆ ಕನಿಷ್ಠ ಕಂಚು ಗೆಲ್ಲುವ ಅವಕಾಶವನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡರು. ಆದರೆ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಅದಿತಿ ಬಗ್ಗೆ ಭಾರತದ ಕ್ರೀಡಾಭಿಮಾನಿಗಳು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.