ಟೋಕಿಯೋ: ಮಹಿಳೆಯರ ವೈಯಕ್ತಿಕ ಗಾಲ್ಫ್ ವಿಭಾಗದಲ್ಲಿ ಭಾರತದ ಅದಿತಿ ಅಶೋಕ್ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಮೂರನೇ ಸ್ಥಾನ ಪಡೆದಿದ್ದು, ಭಾರತಕ್ಕೆ ಅಚ್ಚರಿಯ ಪದಕ ಗೆದ್ದುಕೊಡುವ ಭರವಸೆ ನೀಡಿದ್ದಾರೆ.
ಇದೀಗ ಮಳೆಯಿಂದಾಗಿ ಆಟ ಸ್ಥಗಿತಗೊಂಡಿದ್ದು, ಇದುವರೆಗಿನ ಅಂಕ ಪಟ್ಟಿಯ ಆಧಾರದಲ್ಲಿ ಅದಿತಿ ಅಮೆರಿಕಾ,ಜಪಾನ್ ಸ್ಪರ್ಧಿಯ ಬಳಿಕ ಮೂರನೆಯ ಸ್ಥಾನ ಪಡೆದಿದ್ದಾರೆ. ಮೂರನೇ ರೌಂಡ್ ಮುಕ್ತಾಯವಾದಾಗ ಅದಿತಿ ಎರಡನೇ ಸ್ಥಾನಕ್ಕೇರಿದ್ದಾರೆ.
ಇದರೊಂದಿಗೆ ಅದಿತಿ ಬೆಳ್ಳಿ ಪದಕ ಗೆದ್ದುಕೊಡುವ ನಿರೀಕ್ಷೆ ಮೂಡಿದೆ. ಇದನ್ನು ಅವರು ಉಳಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ.