Select Your Language

Notifications

webdunia
webdunia
webdunia
Thursday, 10 April 2025
webdunia

ಹಾಕಿ ಪ್ರಾಕ್ಟೀಸ್ ಗಾಗಿ ಕುಟುಂಬ ಮಿಸ್ ಮಾಡಿಕೊಂಡಿದ್ದ ಆಟಗಾರರು

ಭಾರತ ಹಾಕಿ ತಂಡ
ಟೋಕಿಯೋ , ಶನಿವಾರ, 7 ಆಗಸ್ಟ್ 2021 (12:12 IST)
ಟೋಕಿಯೋ: ಒಲಿಂಪಿಕ್ಸ್ ನಲ್ಲಿ 41 ವರ್ಷಗಳ ಬಳಿಕ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತ ಹಾಕಿ ತಂಡದ ಆಟಗಾರರು ಮಾಧ‍್ಯಮ ಸಂದರ್ಶನದಲ್ಲಿ ಸಂತಸ ಹಂಚಿಕೊಂಡಿದ್ದಾರೆ.


ಜೊತೆಗೆ ಈ ಸಾಧನೆಗಾಗಿ ತಾವು ಮತ್ತು ಕುಟುಂಬಸ್ಥರು ಮಾಡಿದ ತ್ಯಾಗ ನೆನೆಸಿಕೊಂಡಿದ್ದಾರೆ. ಈ ಗೆಲುವಿನ ಹೀರೋ ಗೋಲ್ ಕೀಪರ್ ಶ್ರೀಜೇಶ್ ಕಳೆದ ಆರು ತಿಂಗಳಿನಿಂದ ಕುಟುಂಬದವರಿಂದ ದೂರವಿದ್ದ ವಿಚಾರವನ್ನು ಹೇಳಿದ್ದಾರೆ. ಕುಟುಂಬಸ್ಥರನ್ನು ತುಂಬಾ ಮಿಸ್ ಮಾಡಿಕೊಂಡಿದ್ದೇವೆ. ಇದಕ್ಕಾಗಿ ಪತ್ನಿಗೆ ಧನ್ಯವಾದ ಹೇಳಲೇಬೇಕು ಎಂದು ಅವರು ಹೇಳಿದ್ದಾರೆ.

ಹೆಚ್ಚು ಕಡಿಮೆ ಎಲ್ಲಾ ಆಟಗಾರರದ್ದೂ ಇದೇ ಕತೆ. ಹೀಗಾಗಿ ಭಾರತಕ್ಕೆ ಬಂದೊಡನೇ ಕೆಲವು ದಿನ ಹಾಕಿ ಮರೆತು ಇಷ್ಟು ದಿನ ಮಿಸ್ ಮಾಡಿಕೊಂಡಿದ್ದನ್ನೆಲ್ಲಾ ಅನುಭವಿಸಬೇಕು ಎಂದು ನಾಯಕ ಮನ್ ಪ್ರೀತ್ ಸಿಂಗ್, ಶ್ರೀಜೇಶ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಟ್ವಿಟರ್ ಖಾತೆಯಿಂದ ಬ್ಲೂ ಟಿಕ್ ಮಾರ್ಕ್ ಮಾಯ!