Select Your Language

Notifications

webdunia
webdunia
webdunia
webdunia

ರಾಜೀವ್ ಗಾಂಧಿ ಖೇಲ್ ರತ್ನ ಅವಾರ್ಡ್ ಇನ್ಮುಂದೆ ಧ್ಯಾನ್ ಚಂದ್ ಅವಾರ್ಡ್! ಕೇಂದ್ರದ ನಿರ್ಧಾರ

ರಾಜೀವ್ ಗಾಂಧಿ ಖೇಲ್ ರತ್ನ ಅವಾರ್ಡ್ ಇನ್ಮುಂದೆ ಧ್ಯಾನ್ ಚಂದ್ ಅವಾರ್ಡ್! ಕೇಂದ್ರದ ನಿರ್ಧಾರ
ನವದೆಹಲಿ , ಶುಕ್ರವಾರ, 6 ಆಗಸ್ಟ್ 2021 (16:56 IST)
ನವದೆಹಲಿ: ಇಷ್ಟು ದಿನ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗಾಗಿ ಕೊಡಮಾಡಲಾಗುವ ಖೇಲ್ ರತ್ನ ಅವಾರ್ಡ್ ನ್ನು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹೆಸರಿನಲ್ಲಿ ನೀಡಲಾಗುತ್ತಿತ್ತು.


ಆದರೆ ಈಗ ಪ್ರಧಾನಿ ಮೋದಿ ಈ ಪ್ರಶಸ್ತಿಗೆ ಮರುನಾಮಕರಣ ಮಾಡಿರುವ ಸುದ್ದಿ ಪ್ರಕಟಿಸಿದ್ದು, ಇನ್ಮುಂದೆ ಖೇಲ್ ರತ್ನ ಅವಾರ್ಡ್ ಭಾರತದ ಹಾಕಿ ದಿಗ್ಗಜ ಧ‍್ಯಾನ್ ಚಂದ್ ಹೆಸರಿನಲ್ಲಿ ಕೊಡಮಾಡಲಾಗುತ್ತದೆ.

ನನಗೆ ದೇಶದ ಅನೇಕ ಜನರು ಖೇಲ್ ರತ್ನ ಅವಾರ್ಡ್ ನ್ನು ಧ್ಯಾನ್ ಚಂದ್ ಹೆಸರಿನಲ್ಲಿ ಮರುನಾಮಕರಣ ಮಾಡಿ ಎಂದು ಮನವಿ ಮಾಡಿದ್ದರು. ಅದರಂತೆ ಇನ್ಮುಂದೆ ಈ ಪ್ರಶಸ್ತಿಯನ್ನು ಧ್ಯಾನ್ ಚಂದ್ ಖೇಲ್ ರತ್ನ ಅವಾರ್ಡ್ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಪ್ರಕಟಣೆ ನೀಡಿದ್ದಾರೆ.

ಇನ್ನು, ಪ್ರಧಾನಿ ಇಂತಹದ್ದೊಂದು ನಿರ್ಧಾರ ಪ್ರಕಟಿಸುತ್ತಿದ್ಧಂತೇ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಸ್ವಾಗತಿಸಿದ್ದು, ಹಾಕಿ ದಿಗ್ಗಜನಿಗೆ ಇಂತಹ ಗೌರವ ನೀಡಿದ್ದನ್ನು ಸ್ವಾಗತಿಸಿದ್ದಾರೆ. ಇನ್ನು, ಕೆಲವರು ಇನ್ನೂ ಹಲವು ಪ್ರಶಸ್ತಿ, ಕ್ರೀಡಾಂಗಣಗಳಿಗೆ ರಾಜಕೀಯ ನಾಯಕರ ಹೆಸರು ಕೈಬಿಟ್ಟು ಕ್ರೀಡಾ ಸಾಧಕರ ಹೆಸರನ್ನೇ ಮರು ನಾಮಕರಣ ಮಾಡಿ ಎಂದು ಒತ್ತಾಯಿಸಿದ್ದಾರೆ. ಮೋದಿ ನಿರ್ಧಾರವನ್ನು ಧ‍್ಯಾನ್ ಚಂದ್ ಪುತ್ರ ಅಶೋಕ್ ಕುಮಾರ್ ಕೂಡಾ ಸ್ವಾಗತಿಸಿದ್ದು, ತಮ್ಮ ತಂದೆಯನ್ನು ಈಗಲೂ ಜನ ನೆನಪಿನಲ್ಲಿಟ್ಟುಕೊಂಡಿರುವುದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಮಿಫೈನಲ್ ನಲ್ಲಿ ಸೋತ ಭಜರಂಗ್ ಪೂನಿಯಾ ಕಂಚಿಗಾಗಿ ಹೋರಾಟ