Select Your Language

Notifications

webdunia
webdunia
webdunia
webdunia

ವಿಪಕ್ಷಗಳಿಂದ ಪ್ರಜಾತಂತ್ರಕ್ಕೆ ಅಪಮಾನ: ಪ್ರಧಾನಿ ಮೋದಿ ವ್ಯಗ್ರ

ವಿಪಕ್ಷಗಳಿಂದ ಪ್ರಜಾತಂತ್ರಕ್ಕೆ ಅಪಮಾನ: ಪ್ರಧಾನಿ ಮೋದಿ ವ್ಯಗ್ರ
ನವದೆಹಲಿ , ಮಂಗಳವಾರ, 3 ಆಗಸ್ಟ್ 2021 (15:39 IST)
ನವದೆಹಲಿ(ಆ. 03): ಎರಡು ವಾರದಿಂದಲೂ ಸಂಸತ್ನ ಮುಂಗಾರು ಅಧಿವೇಶನದ ಸಮಯ ಬರೀ ವಿಪಕ್ಷಗಳ ಗದ್ದಲಗಳಲ್ಲೇ ಕಳೆದುಹೋಗಿದೆ. ಸಾಧ್ಯವಿರುವ 107 ಗಂಟೆಗಳ ಪೈಕಿ ಅಧಿವೇಶನ ನಡೆದಿರುವುದು ಕೇವಲ 18 ಗಂಟೆ ಮಾತ್ರ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ.

ವಿಪಕ್ಷಗಳ ಸದಸ್ಯರು ಅಧಿವೇಶನವನ್ನ ಸುಗಮವಾಗಿ ನಡೆಯಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ ಪ್ರಧಾನಿಗಳು, ಕೆಲ ಸದಸ್ಯರು ಬಳಸುವ ಕೆಟ್ಟ ಭಾಷೆಯು ಕೇವಲ ಸಂಸತ್ತಿಗೆ ಮಾತ್ರವಲ್ಲ ಈ ದೇಶದ ಜನತೆಗೆ ಮಾಡುವ ಅವಮಾನವಾಗಿದೆ ಎಂದು ಟೀಕಿಸಿದ್ದಾರೆ. ತಮ್ಮ ಸರ್ಕಾರಕ್ಕೆ ಜನಸೇವೆಯ ಬದ್ಧತೆ ಇರುವುದರಿಂದ ತನ್ನ ಎಲ್ಲಾ ಸಚಿವರು ಹಾಗೂ ಸಂಸದರು ಸಂಸತ್ ಅಧಿವೇಶನದಲ್ಲಿ ಉಪಸ್ಥಿತರಬೇಕೆಂದು ತಿಳಿಸಿದ್ದೇನೆ. ವಿಪಕ್ಷ ಸದಸ್ಯರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಅಧಿವೇಶನದಲ್ಲಿ ಪಾಲ್ಗೊಂಡು ಕಲಾಪ ಸಮರ್ಪಕವಾಗಿ ನಡೆಯಲು ಸಾಧ್ಯವಾಗುವಂತೆ ಮಾಡಿ ಎಂದು ನರೇಂದ್ರ ಮೋದಿ ಒತ್ತಾಯಿಸಿದ್ದಾರೆ.
ಜುಲೈ 19ರಂದು ಈ ಬಾರಿಯ ಮುಂಗಾರು ಅಧಿವೇಶನ ಪ್ರಾರಂಭವಾಗಿದೆ. ವಿಪಕ್ಷ ಸದಸ್ಯರು ಒಂದಲ್ಲ ಒಂದು ವಿಚಾರ ಇಟ್ಟುಕೊಂಡು ಅಧಿವೇಶನದಲ್ಲಿ ಗದ್ದಲ ನಡೆಸಿ ಕಲಾಪ ಅಸಾಧ್ಯವಾಗಿಸಿದ್ದಾರೆ. ಸರ್ಕಾರದ ಮೂಲಗಳ ಪ್ರಕಾರ ಸಂಸತ್ ಕಲಾಪಕ್ಕೆ ಆಗಿರುವ ಅಡ್ಡಿಯಿಂದಾಗಿ 133 ಕೋಟಿ ನಷ್ಟ ಉಂಟಾಗಿದೆ ಎನ್ನಲಾಗುತ್ತಿದೆ.
ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ನಿರ್ಮಲಾ ಸೀತರಾಮನ್ ಅವರು ದೇಶದ ಆರ್ಥಿಕತೆ ಮತ್ತೆ ಹಳಿಗೆ ಬರುತ್ತಿರುವ ವಿಚಾರವನ್ನು ಒತ್ತಿಹೇಳಿದ್ದು, ಜಿಎಸ್ಟಿ ಸಂಗ್ರಹ ದಾಖಲೆ ಮಟ್ಟದಲ್ಲಿದೆ ಎಂದೂ ತಿಳಿಸಿದ್ದಾರೆ. ಇನ್ನು, ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ವಿ ಮುರಳೀಧರನ್, ಜುಲೈ ತಿಂಗಳಲ್ಲಿ ಸಿಕ್ಕಿರುವ ಖುಷಿ ಸುದ್ದಿ ಬಗ್ಗೆ ಪ್ರಧಾನಿ ಮೋದಿ ಹಂಚಿಕೊಂಡಿದ್ದನ್ನ ತಿಳಿಸಿದ್ದಾರೆ. “1.16 ಲಕ್ಷ ಕೋಟಿಯಷ್ಟು ಜಿಎಸ್ಟಿ ಹಣ ಸಂಗ್ರಹವಾಗಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಪಿ ವಿ ಸಿಂಧು ಅವರು ಕಂಚು ಗೆದ್ದಿರುವುದು, ಹಾಕಿ ತಂಡ ಉತ್ತಮ ಸಾಧನೆ ಮಾಡಿದ್ದು ಎಲ್ಲವೂ ಜುಲೈನಲ್ಲೇ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು…. ಹಾಗೆಯೇ, ಹೊಸ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಇ-ರುಪಿ ((e-Rupi) ಬಗ್ಗೆಯೂ ಅವರು ಮಾತನಾಡಿದರು” ಎಂದು ವಿ ಮುರಳೀಧರನ್ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪಠಾನ್ಕೋಟ್ ಡ್ಯಾಮ್ನಲ್ಲಿ ಸೇನೆಯ ಹೆಲಿಕಾಪ್ಟರ್ ಕ್ರಾಷ್