ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪುರುಷರ ಹಾಕಿ ತಂಡ ಸೆಮಿಫೈನಲ್ ನಲ್ಲಿ ಆಘಾತಕಾರಿಯಾಗಿ ಸೋತ ಬಳಿಕ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
ಪುರುಷರ ಹಾಕಿ ತಂಡ ಸೆಮಿಫೈನಲ್ ಸೋತ ಬಳಿಕ ಸಾಮಾಜಿಕ ಜಾಲತಾಣ ಮೂಲಕ ಸಂದೇಶ ನೀಡಿರುವ ಮೋದಿ, ಸೋಲು-ಗೆಲುವು ಆಟದ ಭಾಗ ಎಂದು ಸಮಾಧಾನಿಸಿದ್ದಾರೆ.
ಫೈನಲ್ ತಲುಪುವ ಅವಕಾಶ ಸ್ವಲ್ಪದರಲ್ಲೇ ಕೈತಪ್ಪಿ ನಿರಾಸೆಯಲ್ಲಿರುವ ಹಾಕಿ ತಂಡಕ್ಕೆ ಸಾಂತ್ವನಿಸಿರುವ ಪ್ರಧಾನಿ ಪುರುಷರ ಹಾಕಿ ತಂಡ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದೆ. ಸೋಲು-ಗೆಲುವು ಆಟದ ಭಾಗ. ನಿಮ್ಮ ಮುಂದಿನ ಆಟಕ್ಕೆ ಶುಭ ಹಾರೈಸುತ್ತೇನೆ. ನಮ್ಮ ಆಟಗಾರರ ಬಗ್ಗೆ ದೇಶಕ್ಕೆ ಹೆಮ್ಮೆಯಿದೆ ಎಂದು ಸ್ಪೂರ್ತಿ ತುಂಬಿದ್ದಾರೆ.