ಟೋಕಿಯೋ: ಬೆಲ್ಜಿಯಂ ವಿರುದ್ಧ ಇಂದು ನಡೆದ ಪುರುಷರ ಹಾಕಿ ಸೆಮಿಫೈನಲ್ ನಲ್ಲಿ ಭಾರತ ತಂಡ ಸೋತ ಬಳಿಕ ನೆಟ್ಟಿಗರು ಮ್ಯಾಚ್ ರೆಫರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬೇಕೆಂದೇ ಮ್ಯಾಚ್ ರೆಫ್ರಿ ಎದುರಾಳಿ ತಂಡಕ್ಕೆ ಸತತವಾಗಿ ಪೆನಾಲ್ಟಿ ಕಾರ್ನರ್ ಅವಕಾಶ ನೀಡಿದರು. ಇದರಿಂದ ಭಾರತಕ್ಕೆ ಅನ್ಯಾಯವಾಯಿತು. ಭಾರತದ ಗೋಲ್ ಕೀಪರ್ ಶ್ರೀಜೇಶ್ ತಮ್ಮಿಂದಾದಷ್ಟು ಗೋಲು ತಡೆಯುವ ಪ್ರಯತ್ನ ಮಾಡಿದರು.
ಭಾರತ ಈ ಪಂದ್ಯ ಸೋತರೂ, ಕೊನೆಯ ಕ್ಷಣದವರೆಗೆ ಎದುರಾಳಿಗಳ ಜೊತೆ ರೆಫ್ರಿ ತೀರ್ಪಿನ ವಿರುದ್ಧವೂ ಹೋರಾಡಿದರು ಎಂದು ಟ್ವಿಟರಿಗರು ಅಭಿಪ್ರಾಯಪಟ್ಟಿದ್ದಾರೆ.