Publish Date: Mon, 02 Aug 2021 (17:22 IST)
Updated Date: Mon, 02 Aug 2021 (17:24 IST)
ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಸತತ ಎರಡನೇ ಬಾರಿಗೆ ಪದಕ ಗೆದ್ದು ಬೀಗಿದ ಪಿ.ವಿ. ಸಿಂಧು ಆ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.
ಮಾಧ‍್ಯಮ ಸಂದರ್ಶನವೊಂದರಲ್ಲಿ ಆ ಕ್ಷಣದ ಬಗ್ಗೆ ಸಿಂಧು ಹೇಳಿಕೊಂಡಿದ್ದಾರೆ. ಗೆದ್ದ ಆ ಕ್ಷಣ ಮಾತೇ ಹೊರಡದಂತಾಯಿತು. ನನ್ನ ಕೋಚ್ ಕಣ್ಣಲ್ಲಿ ನೀರಿತ್ತು. ಇದು ಅತ್ಯಂತ ಅಮೂಲ್ಯ ಕ್ಷಣ. ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಗಟ್ಟಿಯಾಗಿ ಕಿರುಚಿ ನನ್ನೆಲ್ಲಾ ಭಾವನೆಗಳನ್ನು ಹೊರಹಾಕಿದೆ ಎಂದಿದ್ದಾರೆ.
ಇನ್ನು, ಒಲಿಂಪಿಕ್ಸ್ ಗಾಗಿ ತಯಾರಿ ನಡೆಸಲು ಮೆಚ್ಚಿನ ಐಸ್ ಕ್ರೀಂ ಸೇವಿಸುವುದನ್ನೇ ಬಿಟ್ಟಿದ್ದು, ಕಟ್ಟುನಿಟ್ಟಿನ ಆಹಾರ ಪದ್ಧತಿ ಬಗ್ಗೆಯೂ ಹೇಳಿಕೊಂಡಿದ್ದಾರೆ. ಆದರೆ ಅದನ್ನೆಲ್ಲಾ ಮಿಸ್ ಮಾಡಿಕೊಳ್ಳುತ್ತೇನೆ ಎನ್ನುವುದಕ್ಕಿಂತ ಆ ತ್ಯಾಗದ ಫಲದಿಂದ ಸಿಕ್ಕ ಯಶಸ್ಸಿನ ಖುಷಿಯೇ ದೊಡ್ಡದು ಎಂದಿದ್ದಾರೆ. ಇನ್ನು, ಪ್ರಧಾನಿ ಮೋದಿ ತಮ್ಮ ಜೊತೆಗೆ ಮಾತನಾಡಿದ್ದು, ಐಸ್ ಕ್ರೀಂ ಸವಿಯೋಣ ಎಂದಿದ್ದಾರೆ ಎಂದು ಸಿಂಧು ಖುಷಿಯಿಂದಲೇ ಹೇಳಿಕೊಂಡಿದ್ದಾರೆ.
Krishnaveni K
Publish Date: Mon, 02 Aug 2021 (17:22 IST)
Updated Date: Mon, 02 Aug 2021 (17:24 IST)