Select Your Language

Notifications

webdunia
webdunia
webdunia
webdunia

ಒಲಿಂಪಿಕ್ ವೀರರಿಗೆ ಇಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸನ್ಮಾನ

webdunia
ನವದೆಹಲಿ , ಸೋಮವಾರ, 9 ಆಗಸ್ಟ್ 2021 (10:59 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ವಿವಿಧ ವಿಭಾಗಗಳಲ್ಲಿ ಪದಕ ಗೆದ್ದುಕೊಟ್ಟು ದೇಶದ ಕೀರ್ತಿ ಹೆಚ್ಚಿಸದ ಕ್ರೀಡಾಪಟುಗಳಿಗೆ ಇಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸನ್ಮಾನಿಸಲಿದ್ದಾರೆ.


ಕ್ರೀಡಾ ಪ್ರಾಧಿಕಾರ (ಸಾಯ್) ಈ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ನವದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ಸಮಾರಂಭ ನಡೆಯಲಿದೆ.

ಕ್ರೀಡಾ ಸಚಿವ ಅನುರಾಗ್ ಠಾಕೂರ್ ಪದಕ ವಿಜೇತರನ್ನು ಸನ್ಮಾನಿಸಲಿದ್ದು, ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾರಂಭದಲ್ಲಿ ಹಾಜರಿರಲಿದ್ದಾರೆ. ಭಾರತದ ಒಟ್ಟು ಏಳು ಪದಕ ವಿಜೇತರೂ ಈ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಭಜರಂಗ್ ಪೂನಿಯಾಗೆ ಕರೆ ಮಾಡಿಲ್ಲವೆಂಬ ಆರೋಪ: ಅಸಲಿ ಕತೆಯೇನು ಗೊತ್ತಾ?