Publish Date: Mon, 09 Aug 2021 (12:40 IST)
Updated Date: Mon, 09 Aug 2021 (08:55 IST)
ಟೋಕಿಯೋ: ಒಲಿಂಪಿಕ್ಸ್ ಆರಂಭಕ್ಕೆ ಮುನ್ನ ಭಾರತೀಯರಿಗೆ ಕೆಲವು ಕ್ರೀಡಾಳುಗಳು ಪದಕ ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸವಿತ್ತು. ಆದರೆ ದುರಾದೃಷ್ಟವಶಾತ್ ನಿರೀಕ್ಷೆ ಮಾಡಿಕೊಂಡಿದ್ದವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಕೆಲವರು ಹೋರಾಟ ಮಾಡಿ ಸೋತರು.
ಪ್ರಮುಖವಾಗಿ ವಿಶ್ವ ನಂ.1 ತಾರೆ ಎನಿಸಿಕೊಂಡಿದ್ದ ದೀಪಿಕಾ ಕುಮಾರಿ, ಅವರ ಪತಿ ಅತನು ದಾಸ್ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ಇಬ್ಬರೂ ಕ್ವಾರ್ಟರ್ ಲೆವೆಲ್ ನಲ್ಲೇ ಸೋತು ಆಘಾತ ನೀಡಿದರು.
ಇನ್ನು ಕುಸ್ತಿಯಲ್ಲಿ ಅಪಾರ ನಿರೀಕ್ಷೆ ಹೊಂದಿದ್ದ ವಿನೇಶ್ ಪೋಗಟ್, ಬಾಕ್ಸಿಂಗ್ ನಲ್ಲಿ ಸತೀಶ್ ಕುಮಾರ್, ಮೇರಿ ಕೋಮ್ ಆರಂಭದ ಹಂತದಲ್ಲೇ ಸೋತು ನಿರ್ಗಮಿಸಿದರು. ಇವರೆಲ್ಲರ ಮೇಲೆ ಭಾರತಕ್ಕೆ ಭಾರೀ ನಿರೀಕ್ಷೆಯಿತ್ತು. ಟೇಬಲ್ ಟೆನಿಸ್ ನಲ್ಲಿ ಮಣಿಕ್ ಭಾತ್ರಾ, ಶರತ್ ಕಮಲ್ ಆರಂಭಿಕ ಹಂತದಲ್ಲಿ ತೋರಿದ ಪ್ರದರ್ಶನ ನಿರ್ಣಾಯ ಘಟ್ಟದಲ್ಲಿ ತೋರಿಸದೇ ಸೋತು ಹೋದರು. ಒಂದು ವೇಳೆ ಇವರೆಲ್ಲಾ ಖ್ಯಾತಿಗೆ ತಕ್ಕ ಆಟವಾಡಿದ್ದರೆ ಭಾರತ ಪದಕ ಪಟ್ಟಿಯಲ್ಲಿ ಇನ್ನೂ ಮೇಲೇರುತ್ತಿತ್ತು.