Publish Date: Fri, 26 Mar 2021 (11:00 IST)
Updated Date: Fri, 26 Mar 2021 (11:03 IST)
ಮುಂಬೈ: ಸೈನಾ ನೆಹ್ವಾಲ್ ಜೀವನಾಧಾರಿತ ಸಿನಿಮಾ ತೆರೆಗೆ ಬಂದಿದ್ದು, ಈ ಸಿನಿಮಾ ಪ್ರಚಾರದಲ್ಲಿ ಸೈನಾ ಪಾಲ್ಗೊಳ್ಳುತ್ತಿಲ್ಲ. ಇದಕ್ಕೆ ಕಾರಣವೇನು ಗೊತ್ತಾ?
ತಮ್ಮ ಜೀವನಗಾಥೆಯ ಸಿನಿಮಾವನ್ನು ತಾವೇ ಪ್ರಮೋಷನ್ ಮಾಡದೇ ಇರಲು ಸೈನಾ ತೀರ್ಮಾನಿಸಿದ್ದೇಕೆ? ಸಿನಿಮಾ ಪ್ರಮೋಷನ್ ಗೆ ಬರುವಂತೆ ಸೈನಾಗೆ ಸ್ವತಃ ನಿರ್ದೇಶಕ ಅಮೋಲ್ ಗುಪ್ತೆ ಮನವಿ ಮಾಡಿದ್ದರಂತೆ. ಆದರೆ ಸೈನಾ ಇದರಲ್ಲಿ ಆಸಕ್ತಿ ತೋರಿಸಲಿಲ್ಲ.
ಅಷ್ಟೇ ಅಲ್ಲ, ಸೈನಾ ಈಗ ದೇಶದಲ್ಲೇ ಇಲ್ಲ. ಸೈನಾ ಸದ್ಯಕ್ಕೆ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳಲು ವಿದೇಶದಲ್ಲಿದ್ದಾರೆ. ಹೀಗಾಗಿ ಖುದ್ದಾಗಿ ಬಂದು ಚಿತ್ರತಂಡದ ಜೊತೆ ಪ್ರಮೋಷನ್ ಮಾಡಲಾಗುತ್ತಿಲ್ಲ. ಆದರೆ ತಮ್ಮ ಟ್ವಿಟರ್ ಪೇಜ್ ನಲ್ಲಿ ತಮ್ಮ ಸಿನಿಮಾಗೆ ಬಂದಿರುವ ಪ್ರತಿಕ್ರಿಯೆಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.