Select Your Language

Notifications

webdunia
webdunia
webdunia
webdunia

ರಿಷಬ್ ಪಂತ್ ಜೊತೆಗೆ ಕಾಂಪಿಟೀಷನ್ನಾ? ಕೆಎಲ್ ರಾಹುಲ್ ಹೇಳಿದ್ದೇನು ನೋಡಿ

ರಿಷಬ್ ಪಂತ್ ಜೊತೆಗೆ ಕಾಂಪಿಟೀಷನ್ನಾ? ಕೆಎಲ್ ರಾಹುಲ್ ಹೇಳಿದ್ದೇನು ನೋಡಿ
ಪುಣೆ , ಶುಕ್ರವಾರ, 26 ಮಾರ್ಚ್ 2021 (10:23 IST)
ಪುಣೆ: ಟೀಂ ಇಂಡಿಯಾ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ರನ್ನು ಹೊರಗಿಟ್ಟು ಕೆಎಲ್ ರಾಹುಲ್ ಗೆ ವಿಕೆಟ್ ಕೀಪರ್ ಜವಾಬ್ಧಾರಿ ನೀಡಲಾಗುತ್ತಿದೆ. ಹೀಗಾಗಿ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ರಿಷಬ್ ಜೊತೆಗೆ ಪೈಪೋಟಿ ಇದೆಯಾ ಎಂದು ಕೆಎಲ್ ರಾಹುಲ್ ಗೆ ಮಾಧ್ಯಮಗಳು ಪ್ರಶ್ನೆ ಮಾಡಿವೆ. ಇದಕ್ಕೆ ಅವರು ಉತ್ತರಿದ್ದೇನು ಗೊತ್ತಾ?


‘ಈ ಭಾರತೀಯ ತಂಡಕ್ಕೆ ಬಂದ ಮೇಲೆ ಪೈಪೋಟಿ ಇದ್ದೇ ಇರುತ್ತದೆ. ಅದಕ್ಕೆ ನೀವು ಸಿದ್ಧರಾಗಲೇಬೇಕಾಗುತ್ತದೆ. ಆರಾಮಾಗಿ ಕೂತುಕೊಂಡು ನನ್ನ ಸ್ಥಾನ ಏನಿದ್ದರೂ ಭದ್ರವಾಗಿದೆ ಎಂದುಕೊಳ್ಳುವ ಹಾಗಿಲ್ಲ. ಈ ತಂಡದ ಭಾಗವಾದ ಮೇಳೆ ಪ್ರತಿ ದಿನವೂ ನಿಮ್ಮ ಸ್ಥಾನ ಪಡೆಯಲು ಪ್ರಯತ್ನ ಮಾಡುತ್ತಲೇ ಇರಬೇಕಾಗುತ್ತದೆ’ ಎಂದು ರಾಹುಲ್ ಹೇಳಿದ್ದಾರೆ.

ವಿಕೆಟ್ ಕೀಪರ್ ಜವಾಬ್ಧಾರಿ ಕೂಡಾ ನಿಭಾಯಿಸುವ ಕಾರಣಕ್ಕೆ ಕೆಎಲ್ ರಾಹುಲ್ ಗೆ ಏಕದಿನ ತಂಡದಲ್ಲಿ ಸುಲಭವಾಗಿ ಸ್ಥಾನ ಸಿಗುತ್ತಿದೆ. ಅಲ್ಲದೆ, ಕೆಳ ಕ್ರಮಾಂಕದಲ್ಲಿ ರಾಹುಲ್ ಅತ್ಯುತ್ತಮವಾಗಿ ಬ್ಯಾಟ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಲಾಸ್ಟಿಕ್ ಬಾಟಲಿಯಿಂದ ನಿರ್ಮಿತ ಸಿಎಸ್ ಕೆ ಜೆರ್ಸಿಯಲ್ಲಿ ಸೇನೆಗೆ ಗೌರವ