ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸಿಂಗಾಪುರದ ಜೋಸೆಫ್ ಸ್ಕೂಲಿಂಗ್ ಶುಕ್ರವಾರ ಅಮೆರಿಕದ ದಾಖಲೆಯ ಈಜುಗಾರ ಮೈಕೇಲ್ ಫೆಲ್ಪ್ಸ್ ಅವರನ್ನು 100 ಮೀ ಬಟರ್‌ಫ್ಲೈನಲ್ಲಿ ಸೋಲಿಸಿ ಸಿಂಗಾಪುರದ ಪ್ರಪ್ರಥಮ ಒಲಿಂಪಿಕ್ ಚಿನ್ನದ ಪದಕ ವಿಜೇತರಾದರು. 21 ವರ್ಷದ ಯುವಕ ಜೋಸೆಫ್ ಫೆಲ್ಪ್ಸ್ ಅವರ ವೃತ್ತಿಜೀವನದ 23ನೇ ಚಿನ್ನದ ಹಸಿವನ್ನು ವಿಫಲಗೊಳಿಸಿದರು.
ಏಷ್ಯಾದ ಚಾಂಪಿಯನ್ ಸ್ಕೂಲಿಂಗ್ ಹಣಾಹಣಿ ಹೋರಾಟ ನೀಡಿ 50.39 ಸೆಕೆಂಡುಗಳಲ್ಲಿ ಗುರಿಮುಟ್ಟುವ ಮೂಲಕ ಫೆಲ್ಪ್ಸ್ ಅವರಿಗೆ ಐದನೇ ಸತತ ಚಿನ್ನದ ಪದಕವನ್ನು ತಪ್ಪಿಸಿದರು. ಫೆಲ್ಪ್ಸ್ ಚಾಡ್ ಲೀ ಕ್ಲೋಸ್ ಮತ್ತು ಲಾಸ್‌ಜ್ಲೋ ಸೆಹ್ ಜತೆ ಬೆಳ್ಳಿಪದಕ ಹಂಚಿಕೊಂಡರು.
ರಿಯೊದಲ್ಲಿ ನಾಲ್ಕು ಫೈನಲ್ಸ್‌ಗಳಲ್ಲಿ ಜಯಗಳಿಸಿದ ಅಮೆರಿಕನ್ ಫೆಲ್ಪ್ಸ್ ದಾಖಲೆಯ ಒಟ್ಟು 22 ಚಿನ್ನದ ಪದಕಗಳನ್ನು ಗೆದ್ದಿದ್ದು, ಕ್ಲಾಸ್ ಮತ್ತು ಸೆಹ್ ಜತೆಗೆ 51.14 ಸೆಕೆಂಡುಗಳಲ್ಲಿ ಗುರಿಮುಟ್ಟಿದರು.
ಕಳೆದ ಬಾರಿಯ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸ್ಕೂಲಿಂಗ್ ನೀರಿಗೆ ಗುದ್ದಿ ಚಿನ್ನದ ಪದಕ ಗೆದ್ದ ಹರ್ಷದಿಂದ ಕೂಗಿದಾಗ ಫೆಲ್ಪ್ಸ್ ಸ್ಕೂಲಿಂಗ್ ಬೆನ್ನು ತಟ್ಟಿ ಅಭಿನಂದಿಸಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ