ಭುವನೇಶ್ವರ್ ಕುಮಾರ್ ತಮ್ಮ ಮಾರಕ ಬೌಲಿಂಗ್ ದಾಳಿ ಮೂಲಕ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ನಾಶಕ್ಕೆ ಕಾರಣರಾಗಿ ಸ್ವದೇಶಿ ತಂಡ ನಾಲ್ಕನೇ ದಿನ 225 ರನ್‌ಗೆ ಆಲೌಟ್ ಆಗಿದೆ.
ವೆಸ್ಟ್ ಇಂಡೀಸ್ ಒಂದು ಹಂತದಲ್ಲಿ 202ಕ್ಕೆ 3 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಭುವನೇಶ್ವರ್ ಕುಮಾರ್ ಮಾರಕ ಬೌಲಿಂಗ್ ದಾಳಿಯ ಮೂಲಕ 23. 4ಓವರುಗಳಲ್ಲಿ 33ಕ್ಕೆ 5 ವಿಕೆಟ್ ಕಬಳಿಸಿದ್ದರಿಂದ ವಿಂಡೀಸ್ 225 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.
ಸ್ವದೇಶಿ ತಂಡ ತನ್ನ ಕೊನೆಯ ಏಳು ವಿಕೆಟ್‌ಗಳನ್ನು 23 ರನ್‌ಗಳಿಗೆ ಕಳೆದುಕೊಂಡಿದ್ದರಿಂದ ಮೊದಲ ಇನ್ನಿಂಗ್ಸ್‌ನಲ್ಲಿ 128 ರನ್ ಲೀಡ್ ಅನುಕೂಲವನ್ನು ಭಾರತ ಪಡೆಯಿತು. ಭಾರತ ತಂಡ ನಾಲ್ಕನೇ ದಿನದಾಟ ಮುಗಿದಾಗ 157ಕ್ಕೆ 3 ವಿಕೆಟ್ ಕಳೆದುಕೊಂಡು ಒಟ್ಟಾರೆ 285 ರನ್ ಲೀಡ್ ಗಳಿಸಿದೆ. ಅಜಿಂಕ್ಯಾ ರಹಾನೆ ಮತ್ತು ರೋಹಿತ್ ಶರ್ಮಾ ನಡುವೆ ಮುರಿಯದ ನಾಲ್ಕನೇ ವಿಕೆಟ್ ಜತೆಯಾಟದಿಂದ 85 ರನ್ ಮೂಡಿಬಂದು ಭಾರತ ಹತೋಟಿ ಸಾಧಿಸಿತು.
ಮೊದಲ 15 ಓವರುಗಳವರೆಗೆ ವಿಕೆಟ್ ರಹಿತರಾದ ಕುಮಾರ್ ಎಸೆತಕ್ಕೆ ಬ್ಲಾಕ್‌ವುಡ್ ಸ್ಲಿಪ್‌ನಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ಔಟಾದರು. ಇದರಿಂದ ಸ್ಯಾಮುಯಲ್ಸ್ ಜತೆ ಬ್ಲಾಕ್‌ವುಡ್ 67 ರನ್ ಜತೆಯಾಟಕ್ಕೆ ತೆರೆಬಿತ್ತು.
ಮುಂದಿನ ಓವರಿನಲ್ಲಿ ಕುಮಾರ್ ಬೌಲಿಂಗ್‌ನಲ್ಲಿ ಸ್ಯಾಮುಯಲ್ಸ್ ಬೌಲ್ಡ್ ಆದ ಬಳಿಕ ವಿಕೆಟ್‌ಗಳು ಒಂದರ ಹಿಂದೊಂದು ಉರುಳತೊಡಗಿದವು. ಕೆಳಕ್ರಮಾಂಕದ ಯಾರಿಗೂ ಫಾಸ್ಟ್ ಮೀಡಿಯಂ ಬೌಲರ್ ನಿಖರ ಬೌಲಿಂಗ್ ದಾಳಿಯನ್ನು ನಿಭಾಯಿಸಲಾಗಲಿಲ್ಲ. ಭಾರತ 157ಕ್ಕೆ 3 ವಿಕೆಟ್ ಕಳೆದುಕೊಂಡಿದ್ದು, ಬೇಗನೇ ಡಿಕ್ಲೇರ್ ಮಾಡಿಕೊಂಡು ಸರಣಿ ಜಯ ಸಾಧಿಸುವ ತವಕದಲ್ಲಿದೆ.
ಭಾರತ ಮೊದಲ ಇನ್ನಿಂಗ್ಸ್ 353ಕ್ಕೆ ಆಲೌಟ್
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ 225ಕ್ಕೆ 10 ವಿಕೆಟ್
ಬ್ರಾತ್‌ವೈಟ್ 64, ಜಾನ್ಸನ್ 23, ಬ್ರೇವೊ 29, ಸ್ಯಾಮುಯಲ್ಸ್ 48, ಬ್ಲಾಕ್‌ವುಡ್ 20
ವಿಕೆಟ್ ಪತನ
59-1 (ಲಿಯಾನ್ ಜಾನ್ಸನ್, 24), 129-2 (ಡ್ಯಾರೆನ್ ಬ್ರಾವೊ, 55.4), 135-3 (ಕ್ರೈಗ್ ಬ್ರಾಥ್ವೈಟ್, 58.1), 202-4 (ಜರ್ಮೈನ್ ಬ್ಲ್ಯಾಕ್ 87.2), 203-5 (ಮರ್ಲಾನ್ ಸ್ಯಾಮುಯೆಲ್ಸ್, 89.5), 205-6 (ರೋಸ್ಟನ್ ಚೇಸ್, 90.5), 212-7 (ಜೇಸನ್ ಹೋಲ್ಡರ್, 93.5), 212-8 (ಅಲ್ಜಾರಿ ಜೋಸೆಫ್, 95.4), 221-9 (ಮಿಗುಯೆಲ್ ಕಮಿನ್ಸ್, 102.3), 225-10 (ಶೇನ್ ಡೌರಿಕ್, 103.4)
ಬೌಲಿಂಗ್ ವಿವರ
ಭುವನೇಶ್ವರ್ ಕುಮಾರ್ 5 ವಿಕೆಟ್, ಅಶ್ವಿನ್ 2 ವಿಕೆಟ್, ಇಶಾಂತ್ ಶರ್ಮಾ 1 ವಿಕೆಟ್, ಜಡೇಜಾ 1 ವಿಕೆಟ್
ಭಾರತ ಎರಡನೇ ಇನ್ನಿಂಗ್ಸ್
ಲೋಕೇಶ್ ರಾಹುಲ್ 28 ರನ್, ಶಿಖರ್ ಧವನ್ 26 ರನ್, ರಹಾನೆ 51 ರನ್ ನಾಟೌಟ್, ರೋಹಿತ್ ಶರ್ಮಾ 41 ರನ್ ನಾಟೌಟ್
ಒಟ್ಟು 157ಕ್ಕೆ 3 ವಿಕೆಟ್
ಕಮ್ಮಿನ್ಸ್ 2 ವಿಕೆಟ್, ರೋಸ್ಟನ್ ಚೇಸ್ 1 ವಿಕೆಟ್.