ಅತನು ದಾಸ್ ಪುರುಷರ ವೈಯಕ್ತಿಕ ರಿಕರ್ವ್ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಸೋತು ಭಾರತದ ಬಿಲ್ಲುಗಾರಿಕೆ ಅಭಿಯಾನಕ್ಕೆ ತೆರೆಬಿದ್ದಿದೆ.
ಅತನು ದಾಸ್ ವಿಶ್ವ ನಂಬರ್ 8 ಲೀ ಸಿಯುಂಗ್ ಯುನ್ ಅವರ ವಿರುದ್ಧ ಎರಡು ಸೆಟ್ ಸೋಲು ಮತ್ತು ಒಂದು ಸೆಟ್ ಗೆಲುವು ಹಾಗು ಉಳಿದೆರಡು ಸೆಟ್ ಡ್ರಾ ಮೂಲಕ 28-30, 30-28, 27-27, 27-28, 28-28 ರಿಂದ ಸೋತರು.
ಪ್ರತಿಯೊಂದು ಪಂದ್ಯ ಅದರದ್ದೇ ಆದ ಒತ್ತಡದಿಂದ ಕೂಡಿದೆ. ಒಲಿಂಪಿಕ್ಸ್‌ನಲ್ಲಿ ಹೆಚ್ಚು ಒತ್ತಡವಿರುತ್ತದೆ. ನಾನು ಉತ್ತಮ ಪ್ರಯತ್ನ ಮಾಡಿದರೂ ಯಶಸ್ವಿಯಾಗಲಿಲ್ಲ. ಮುಂದಿನ ಸಲ ನಾನು ಉತ್ತಮವಾಗಿ ಆಡುವುದಾಗಿ ಅತನು ಸ್ಪರ್ಧೆಯಿಂದ ನಿರ್ಗಮಿಸುತ್ತಾ ಹೇಳಿದರು. ಮಹಿಳಾ ಬಿಲ್ಲುಗಾರರಾದ ಲೈಶ್‌ರಾಮ್ ಬೊಂಬಾಯಿಲ ದೇವಿ, ದೀಪಿಕಾ ಕುಮಾರಿ ಮತ್ತು ಲಕ್ಷ್ಮಿರಾಣಿ ಮಾಜ್ಹಿ ಈಗಾಗಲೇ ಮಹಿಳಾ ತಂಡ ಮತ್ತು ವೈಯಕ್ತಿಕ ಈವೆಂಟ್‌ಗಳಲ್ಲಿ ಸೋತು ನಿರ್ಗಮಿಸಿದ್ದಾರೆ.
ಇನ್ನೊಂದು ನಿಖರ ಗುರಿಯ ಕ್ರೀಡೆ ಶೂಟಿಂಗ್‌ನಲ್ಲಿ ಕೂಡ ನಾರಂಗ್ ಮತ್ತು ಚೇನ್ ಸಿಂಗ್ 50 ಮೀಟರ್ ರೈಫಲ್ ಪ್ರೋನ್ ಈವೆಂಟ್‌ನಲ್ಲಿ ಸೋತು ನಿರ್ಗಮಿಸಿದರು. ಅರ್ಹತಾ ಸುತ್ತಿನಲ್ಲಿ ನಾರಂಗ್ 623.1 ಸ್ಕೋರ್‌ನೊಂದಿಗೆ 13ನೇ ಸ್ಥಾನ ಪಡೆದರೆ ಸಿಂಗ್ 619.6 ಸ್ಕೋರ್‍ನೊಂದಿಗೆ 36ನೇ ಸ್ಥಾನ ಪಡೆದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ