ದಬಾಂಗ್ ಸಿನಿಮಾ ಸಲ್ಮಾನ್ ಖಾನ್ ಅವರಿಗೆ ಬಾಲಿವುಡ್ ನಲ್ಲಿ ಯಾವ ಮಟ್ಟಿಗೆ ಇಮೇಜ್ ನ್ನು ಕಟ್ಟಿಕೊಟ್ಟಿತ್ತು ಅನ್ನೋದು ಎಲ್ಲರಿಗೂ ಗೊತ್ತಿದೆ. ಈಗಾಗಲೇ ದಬಾಂಗ್, ದಬಾಂಗ್ -2 ಸಿನಿಮಾದ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಸಲ್ಮಾನ್ ಖಾನ್ ಅವರು ದಬಾಂಗ್-3 ನಲ್ಲೂ ಅಭಿನಯಿಸುತ್ತಾರೆ ಅನ್ನೋ ಸುದ್ದಿ ಬಹು ದಿನಗಳಿಂದ ಕೇಳಿ ಬರುತ್ತಲೇ ಇದೆ. ಹೀಗಿರುವಾಗಲೇ ಸಿನಿಮಾದ ಶೂಟಿಂಗ್ ಬಗ್ಗೆ ಅಚ್ಚರಿಯ ವಿಚಾರವೊಂದು ಹೊರ ಬಿದ್ದಿದೆ.
ಸದ್ಯ ಸಲ್ಮಾನ್ ಖಾನ್ ಅಭಿನಯಿಸಿದ್ದ ಸುಲ್ತಾನ್ ಸಿನಿಮಾದ ಹವಾ ಎಲ್ಲೆಡೆ ಜೋರಾಗಿದೆ. ಸಿನಿಮಾ ರಿಲೀಸ್ ಆಗಿ ಸಲ್ಲು ಭಾಯಿ ಕೊಂಚ ಫ್ರೀ ಮಾಡಿಕೊಂಡಿರೋದರಿಂದ ಅವರು ಇದೀಗ ದಬಾಂಗ್ -3 ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಸಿ ಕೊಂಡಿದ್ದಾರೆ ಅನ್ನೋ ಮಾತುಗಳು ಬಾಲಿವುಡ್ ಗಲ್ಲಿಗಳಲ್ಲಿ ಹರಿದಾಡುತ್ತಿವೆ.
ಸಲ್ಲು ರಹಸ್ಯವಾಗಿ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಈಗ ಇದೇ ವಿಚಾರ ಒಂದಷ್ಟು ಚರ್ಚೆಗೆ ಕಾರಣವಾಗಿದೆ.
ಅಂದ್ಹಾಗೆ ಸಲ್ಮಾನ್ ಖಾನ್ ಅವರು ದಂಬಾಗ್ -3 ಸಿನಿಮಾದಲ್ಲಿ ರಹಸ್ಯವಾಗಿ ಅಭಿನಯಿಸುತ್ತಿದ್ದಾರೆ ಅನ್ನೋದು ಪಕ್ಕಾ ಸುಳ್ಳು ಸುದ್ದಿಯಂತೆ.ಅಷ್ಟಕ್ಕೂ ಆಗಿರೋದು ಇಷ್ಟೇ. ಸಲ್ಮಾನ್ ಖಾನ್ ಅವರು ಜಾಹೀರಾತೊಂದಕ್ಕಾಗಿ ತಮ್ಮ ದಬಾಂಗ್ ಸಿನಿಮಾದ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ಈ ಜಾಹೀರಾತಿನ ಶೂಟಿಂಗ್ ವೇಳೆ ತೆಗೆದಿರುವ ಸಲ್ಲು ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನೇ ಕೆಲವರು ದಬಾಂಗ್ -3 ಸಿನಿಮಾದ ಶೂಟಿಂಗ್ ಅಂತಾ ಸುಳ್ಳು ಸುದ್ದಿ ಹರಡಿಸಿದ್ದು ಒಂದಷ್ಟು ಗಾಸಿಪ್ ಗಳಿಗೆ ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ