Select Your Language

Notifications

webdunia
webdunia
webdunia
webdunia

ರಿಯೋ ಒಲಿಂಪಿಕ್ಸ್ ಬಿಲ್ಲುಗಾರಿಕೆ: ಅತಾನುದಾಸ್‌ಗೆ 5ನೇ ಸ್ಥಾನ

ರಿಯೋ ಒಲಿಂಪಿಕ್ಸ್ ಬಿಲ್ಲುಗಾರಿಕೆ: ಅತಾನುದಾಸ್‌ಗೆ  5ನೇ ಸ್ಥಾನ
ನವದೆಹಲಿ: , ಶುಕ್ರವಾರ, 5 ಆಗಸ್ಟ್ 2016 (19:52 IST)
ರಿಯೋ ಒಲಿಂಪಿಕ್ಸ್ ಪುರುಷರ ಮತ್ತು ಮಹಿಳೆಯರ ಬಿಲ್ಲುಗಾರಿಕೆ ಸ್ಪರ್ಧೆಗಳು( ತಂಡ ಮತ್ತು ವೈಯಕ್ತಿಕ ಎರಡೂ) ಭಾರತೀಯ ಕಾಲಮಾನ ಸಂಜೆ 5.30 ಗಂಟೆಗೆ ಆರಂಭವಾಗಿದೆ. ಭಾರತದ ಅತಾನು ದಾಸ್ 12ನೇ ಸುತ್ತಿನಲ್ಲಿ 58 ಪಾಯಿಂಟ್ ಗಳಿಸುವ ಮೂಲಕ 32 ನೇ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

ಅವರ ಒಟ್ಟು ಸ್ಕೋರ್ 683 ಆಗಿದ್ದು, 24 ವರ್ಷದ ಬಿಲ್ಲುಗಾರ ಅತಾನುದಾಸ್ 5ನೇ ಸ್ಥಾನದಲ್ಲಿ ಮುಕ್ತಾಯ ಕಂಡಿದ್ದಾರೆ. ನಾಲ್ಕು ವರ್ಷಗಳ ಹಿಂದಿನ ಒಲಿಂಪಿಕ್ಸ್‌ನಲ್ಲಿ ವಿಫಲರಾಗಿದ್ದ ಭಾರತದ ಬಿಲ್ಲುಗಾರರ ತಂಡವು 15 ದಿನಗಳಿಗೆ ಮುಂಚೆ ಇಲ್ಲಿಗೆ ಆಗಮಿಸಿದ್ದು, ಮಹಿಳಾ ಟೀಂ ಈವೆಂಟ್‌ನಲ್ಲಿ ಕನಿಷ್ಟ ಒಂದು ಪದಕವನ್ನಾದರೂ ಗೆಲ್ಲುವ ಆಶಯ ಹೊಂದಿದ್ದಾರೆ.

ಬೊಂಬಾಲ್ಯಾ ದೇವಿ ಅನುಭವದ ಜತೆಗೆ ಮಾಜಿ ವಿಶ್ವ ನಂಬರ್ ಒನ್ ದೀಪಿಕಾ ಕುಮಾರಿ ಮತ್ತು ಭರವಸೆಯ ಲಕ್ಷ್ಮಿರಾಣಿ ಮಾಜ್ಹಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಧಾ ಸಮಿತಿ ಶಿಫಾರಸು ಅನುಷ್ಠಾನ: ಗೊಂದಲದಲ್ಲಿ ಸಿಕ್ಕಿಬಿದ್ದ ಬಿಸಿಸಿಐ