Select Your Language

Notifications

webdunia
webdunia
webdunia
webdunia

ರಿಯೊ 2016: ಸಾನಿಯಾ-ರೋಹನ್ ಟೆನಿಸ್ ಮಿಶ್ರ ಡಬಲ್ಸ್ ಸೆಮಿಫೈನಲ್ಸ್‌ಗೆ ಪ್ರವೇಶ

ರಿಯೊ 2016: ಸಾನಿಯಾ-ರೋಹನ್ ಟೆನಿಸ್ ಮಿಶ್ರ ಡಬಲ್ಸ್ ಸೆಮಿಫೈನಲ್ಸ್‌ಗೆ ಪ್ರವೇಶ
ರಿಯೊ ಡಿ ಜನೈರೊ , ಶನಿವಾರ, 13 ಆಗಸ್ಟ್ 2016 (10:02 IST)
ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಬ್ರಿಟನ್‌ನ ಹೆದರ್ ವಾಟ್ಸನ್ ಮತ್ತು ಆ್ಯಂಡಿ ಮರ್ರೆಯನ್ನು 6-4, 6-4 ಸೆಟ್‌ಗಳಿಂದ ಸೋಲಿಸಿ ಮಿಶ್ರ ಡಬಲ್ಸ್ ಸೆಮಿಫೈನಲ್ಸ್‌ ಪ್ರವೇಶಿಸಿದ್ದಾರೆ. ಈ ಪಂದ್ಯ 67 ನಿಮಿಷಗಳ ಕಾಲ ಮುಂದುವರೆದಿತ್ತು. ಮುಂದಿನ ಪಂದ್ಯದಲ್ಲಿ ಭಾರತದ ಜೋಡಿ ಗೆಲುವು ಗಳಿಸಿದರೆ ದೇಶದ ಪದಕದ ಬರಕ್ಕೆ ತೆರೆ ಬೀಳಲಿದೆ.

ಮುಂದಿನ ಪಂದ್ಯದಲ್ಲಿ ಸೋತರೂ ಅವರಿಗೆ ಕಂಚಿನ ಪದಕ ಗೆಲ್ಲುವ ಅವಕಾಶವಿದೆ. ಭಾರತಕ್ಕೆ ಲಿಯಾಂಡರ್ ಪೇಸ್ ಮೂಲಕ ಒಂದು ಪದಕ ಮಾತ್ರ ದಕ್ಕಿದೆ. ಪೇಸ್ 1996 ಅಟ್ಲಾಂಟಾ ಕ್ರೀಡಾಕೂಟದಲ್ಲಿ ಸಿಂಗಲ್ಸ್ ಕಂಚು ಗೆದ್ದಿದ್ದರು.
 
 ಸಾನಿಯಾ ಮತ್ತು ಬೋಪಣ್ಣ ಮೊದಲ ಸೆಟ್‌ನ ಎರಡನೇ ಗೇಮ್‌ನಲ್ಲಿ ಸರ್ವ್ ಕಳೆದುಕೊಂಡು 0-2ರಿಂದ ಹಿಂದುಳಿದರು. ಮೂರನೇ ಗೇಮ್‌ನಲ್ಲಿ ಸರ್ವ್ ಮುರಿದು ಪುನಃ ಕಮ್‌ಬ್ಯಾಕ್ ಆಗಿ ಮೊದಲ ಸೆಟ್‌ನಲ್ಲಿ 4-3 ಮುನ್ನಡೆ ಗಳಿಸಿ ಸೆಟ್ಟನ್ನು 6-4ರಿಂದ ಗೆದ್ದುಕೊಂಡರು.
 
 ಎರಡನೇ ಸೆಟ್‌ನಲ್ಲಿ ಮೊದಲ ಎರಡು ಸರ್ವ್‌ಗಳನ್ನು ಉಳಿಸಿಕೊಂಡು 5ನೇ ಗೇಮ್‌ನಲ್ಲಿ 3-2 ಮುನ್ನಡೆ ಸಾಧಿಸಿ ಬಳಿಕ 6-4ರಿಂದ ಸೆಟ್‌ನಲ್ಲಿ ಗೆದ್ದರು. ಇನ್ನುಳಿದ ಎರಡು ಪಂದ್ಯಗಳನ್ನು ಗೆದ್ದರೆ ಭಾರತಕ್ಕೆ ಟೆನಿಸ್‌ನಲ್ಲಿ ಚಿನ್ನದ ಪದಕ ದಕ್ಕಲಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಒಲಿಂಪಿಕ್ಸ್‌ನಲ್ಲಿ ಮಿಂಚಲು ಭಾರತ ವಿಫಲವಾಗಿದ್ದೇಕೆ, ಕಾರಣ ಚೀನಾಗೆ ಗೊತ್ತಿದೆ