Select Your Language

Notifications

webdunia
webdunia
webdunia
webdunia

ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಜೊತೆ ನೀರಜ್ ಚೋಪ್ರಾ ಮದುವೆ ಸುದ್ದಿ ವೈರಲ್

PV Sindhu Neeraj Chopra

Krishnaveni K

ಹೈದರಾಬಾದ್ , ಬುಧವಾರ, 7 ಫೆಬ್ರವರಿ 2024 (09:43 IST)
Photo Courtesy: Twitter
ಹೈದರಾಬಾದ್: ಭಾರತದ ಖ್ಯಾತ ಕ್ರೀಡಾ ತಾರೆಯರಾದ ಬ್ಯಾಡ್ಮಿಂಟನ್ ಪಟು ಪಿವಿ ಸಿಂಧು ಮತ್ತು ಜ್ಯಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಮದುವೆಯಾಗಲಿದ್ದಾರಾ? ಇಬ್ಬರ ಸೋಷಿಯಲ್ ಮೀಡಿಯಾ ಪೋಸ್ಟ್ ಒಂದು ಈ ಚರ್ಚೆ ಹುಟ್ಟು ಹಾಕಿದೆ.

ಜ್ಯಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಬ್ಯಾಡ್ಮಿಂಟನ್ ರಾಕೆಟ್ ಮತ್ತು ಕಾಕ್ ಫೋಟೋ ಪ್ರಕಟಿಸಿ ಇದರ ಅರ್ಥವೇನು ಎಂದು ಊಹೆ ಮಾಡ್ತೀರಾ ಎಂದು ಪೋಸ್ಟ್ ಹಾಕಿದ್ದರು. ಅದನ್ನು ಪಿವಿ ಸಿಂಧುಗೆ ಟ್ಯಾಗ್ ಮಾಡಿದ್ದರು. ಬಳಿಕ ಪಿವಿ ಸಿಂಧು ಕೂಡಾ ತಮ್ಮ ಖಾತೆಯಲ್ಲಿ ಜ್ಯಾವೆಲಿನ್ ಫೋಟೋ ಪ್ರಕಟಿಸಿ ಇದು ಹೇಗೆ ನನ್ನ ಬಳಿ ಬಂತು ಎಂದು ಬರೆದುಕೊಂಡಿದ್ದರು. ಅವರೂ ನೀರಜ್ ಗೆ ಈ ಪೋಸ್ಟ್ ಟ್ಯಾಗ್ ಮಾಡಿದ್ದರು. ಇಬ್ಬರ ಪೋಸ್ಟ್ ನೋಡಿ ನೆಟ್ಟಿಗರು ಇಬ್ಬರೂ ಮದುವೆಯಾಗುತ್ತಿದ್ದಾರೆ ಎಂದು ಊಹಿಸಿ ಶುಭಾಶಯ ಹೇಳಿದ್ದೇ ಹೇಳಿದ್ದು.

ಭಾರತಕ್ಕೆ ಒಲಿಂಪಿಕ್ಸ್ ಪದಕ ಗೆದ್ದುಕೊಟ್ಟ ಹೆಮ್ಮೆಯ ತಾರೆಯರು. ಇಬ್ಬರೂ ಮದುವೆಯಾದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಅಂದುಕೊಂಡಿದ್ದು ಸಹಜ. ಆದರೆ ಅಲ್ಲಿ ಆಗಿದ್ದೇ ಬೇರೆ!

ಇದು ಮದುವೆ ಸುದ್ದಿಯಲ್ಲ!
ಅಷ್ಟಕ್ಕೂ ಪಿ ವಿ ಸಿಂಧು ಮತ್ತು ನೀರಜ್ ಚೋಪ್ರಾ ಮದುವೆ ಬಗ್ಗೆ ಸುಳಿವು ನೀಡಿದ್ದಾರೆ ಎಂದು ಅಂದುಕೊಂಡಿದ್ದ ಅಭಿಮಾನಿಗಳಿಗೆ ಅವರ ಮತ್ತೊಂದು ಪೋಸ್ಟ್ ನಿರಾಸೆ ಮಾಡಿದೆ. ಇಬ್ಬರೂ ಒಂದು ವಿಡಿಯೋ ಪೋಸ್ಟ್ ಮಾಡಿದ್ದು, ಇದರ ಮೂಲಕ ಈ ಪೋಸ್ಟ್ ಇಬ್ಬರೂ ಜೊತೆಯಾಗಿ ವೀಸಾ ಇಂಡಿಯಾ ಜಾಹೀರಾತಿಗಾಗಿ ಈ ರೀತಿ ಜನರಲ್ಲಿ ಕುತೂಹಲ ಸೃಷ್ಟಿಸಿದ್ದರು ಎಂದು ಸ್ಪಷ್ಟವಾಗಿದೆ. ಈ ವಿಡಿಯೋ ಪೋಸ್ಟ್ ನೋಡಿದ ಜನ ಬೇಸರಿಸಿಕೊಂಡಿದ್ದಾರೆ. ನೀವಿಬ್ಬರೂ ಮದುವೆಯಾಗುತ್ತೀರಿ ಎಂದುಕೊಂಡಿದ್ದೆವು. ಈಗ ನೋಡಿದರೆ ಇಷ್ಟೇನಾ ಎಂದು ಬೇಸರಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

U-19 ವಿಶ್ವಕಪ್ ಫೈನಲ್ ಗೆ ಲಗ್ಗೆಯಿಟ್ಟ ಭಾರತ