Select Your Language

Notifications

webdunia
webdunia
webdunia
webdunia

ಅವರಿಗಾಗಿ ನಾನು ಕೇರಳ ಸಾಂಪ್ರದಾಯಿಕ ಆಹಾರ ತಯಾರಿಸುತ್ತೇನೆ: ಶ್ರೀಜೆಶ್ ಪತ್ನಿ ಅನೇಶ್ಯಾ

ಅವರಿಗಾಗಿ ನಾನು ಕೇರಳ ಸಾಂಪ್ರದಾಯಿಕ ಆಹಾರ ತಯಾರಿಸುತ್ತೇನೆ:  ಶ್ರೀಜೆಶ್ ಪತ್ನಿ ಅನೇಶ್ಯಾ

Sampriya

ಕೇರಳ , ಶುಕ್ರವಾರ, 9 ಆಗಸ್ಟ್ 2024 (18:06 IST)
Photo Courtesy X
ಕೇರಳ: ನಾನು ಅವರ ಪತ್ನಿ ಮಾತ್ರವಲ್ಲ, ಅವರ ದೊಡ್ಡ ಅಭಿಮಾನಿಯೂ ಆಗಿದ್ದೇನೆ. ಅಭಿಮಾನಿಯಾಗಿರುವ ನಾನು ಖಂಡಿತವಾಗಿಯೂ ಅವರನ್ನು ಮೈದಾನದಲ್ಲಿ ನೋಡದೆ ಇರುವುದಕ್ಕೆ ತುಂಬಾನೇ ಬೇಜಾರಿದೆ. ಹೆಂಡತಿಯಾಗಿ ಮುಂದಿನ ದಿನಗಳಲ್ಲಿ ಅವರ ಜತೆ ಹೆಚ್ಚು ಸಮಯವನ್ನು ಕಳೆಯಬಹುದೆಂಬ ಖುಷಿಯಿದೆ ಎಂದು ಇಂಡಿಯಾ ಹಾಕಿ ತಂಡದ ಗೋಲ್‌ ಕೀಪರ್ ಶ್ರೀಜೆಶ್  ಪತ್ನಿ ಅನೇಶ್ಯಾ ಅವರು ಮಾತುಗಳು.

ಗುರುವಾರ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಕಂಚಿನ ಪದಕವನ್ನು ಗೆದ್ದಿತು. ಸತತ ಎರಡೂ ಒಲಿಂಪಿಕ್ಸ್‌ಗಳಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಭಾರತದ ಹಾಕಿ ತಂಡ ಅಮೋಘ ಸಾಧನೆ ಮಾಡಿದೆ. ಇನ್ನೂ ಅಂತರರಾಷ್ಟ್ರೀಯ ಸ್ಪರ್ಧೆಗೆ ವಿದಾಯ ಹೇಳಿರುವ ಶ್ರೀಜೆಶ್‌ಗೆ ಇದು ಕೊನೆಯ ಸ್ಪರ್ಧೆಯಾಗಿದ್ದು, ಕಂಚಿನ ಪದಕದೊಂದಿಗೆ ಅವರು ವಿದಾಯ ಹೇಳಿರುವುದು ಭಾರತೀಯ ಕ್ರೀಡಾಭಿಮಾನಿಗಳಿಗೆ ಭಾರೀ ಖುಷಿ.

ಈ ಬಗ್ಗೆ ಅವರ ಪತ್ನಿ, ಮಾಜಿ ಲಾಂಗ್ ಜಂಪರ್ ಹಾಗೂ ಆಯುರ್ವೇದ ವೈದ್ಯೆಯಾಗಿರುವ ಅನೇಶ್ಯಾ ಶ್ರೀಜೆಶ್ ಮಾತನಾಡಿ, ಮನೆಗೆ ವಾಪಾಸ್ಸಾಗುವ ದಿನ ಅವರು ತುಂಬಾ ಇಷ್ಟಪಡುವ ಕೇರಳ ಸಾಂಪ್ರದಾಯಿಕ ಊಟವನ್ನು ಮಾಡಿ ಬಡಿಸುತ್ತೇನೆ. ಅವರಿಗೆ ಕೇರಳ ಶೈಲಿಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಯನ್ನು ತುಂಬಾನೇ ಇಷ್ಟಪಡುತ್ತಾರೆ. ಆ ಊಟವನ್ನು ಮಿಸ್ ಮಾಡಿಕೊಂಡಿರುವುದರಿಂದ ಅವರಿಗೆ ಮಾಡಿ  ಬಡಿಸುತ್ತೇನೆ ಎಂದರು.

ಇನ್ನೂ ಅವರ ಸ್ವಾಗತದ ಬಗ್ಗೆ ಇನ್ನೂ ಯೋಚಿಸಿಲ್ಲ. ಈ ಸಂದರ್ಭದಲ್ಲಿ ಸಾಕಷ್ಟು ಜನರು ಇರುತ್ತಾರೆ. ಅವರ ಸಹೋದರ ತನ್ನ ಕುಟುಂಬದೊಂದಿಗೆ ಕೆನಡಾದಿಂದ ಇಲ್ಲಿಗೆ ಬಂದಿದ್ದಾರೆ. ಇಡೀ ಕುಟುಂಬವು ಇಲ್ಲಿ ಜಮಾಯಿಸಿದೆ. ಇದು ನಮಗೆ ದೊಡ್ಡ ಕ್ಷಣವಾಗಿದೆ ಎಂದು ಅವರು ಹೇಳಿದರು.

"ಇಲ್ಲಿ ಸುಮಾರು 50 ಜನರಿದ್ದರು. ಎಲ್ಲರೂ ನಮ್ಮನ್ನು ಅಭಿನಂದಿಸಿದರು ಮತ್ತು ನಾವು ಒಲಿಂಪಿಕ್ಸ್‌ನಲ್ಲಿ ಸತತ ಎರಡು ಪದಕಗಳನ್ನು ಗೆದ್ದಿರುವುದು ಅಪಾರ ಹೆಮ್ಮೆಯ ಕ್ಷಣವಾಗಿದೆ. ಅವರು ಭಾರತಕ್ಕಾಗಿ ಪದಕ ಗೆದ್ದ ನಂತರ ನಿವೃತ್ತರಾಗಿದ್ದಾರೆ, ಇದು ಅವರ ಉತ್ಸಾಹ ಮತ್ತು ಸಮರ್ಪಣೆಗೆ ಪ್ರತಿಫಲವಾಗಿದೆ. ಆಟ," ಅವಳು ಹೇಳಿದಳು.

Share this Story:

Follow Webdunia kannada

ಮುಂದಿನ ಸುದ್ದಿ

ನಿವೃತ್ತಿ ಘೋಷಿಸಿದ ಶ್ರೀಜೆಶ್‌ಗೆ ಪ್ಯಾರಿಸ್‌ನಲ್ಲಿ ದೊಡ್ಡ ಅವಕಾಶ ಬಿಟ್ಟುಕೊಟ್ಟ ನೀರಜ್ ಚೋಪ್ರಾ