Select Your Language

Notifications

webdunia
webdunia
webdunia
webdunia

'ಆಹಾ ಎಂತಹ ಮುಂಜಾನೆ': ಕಂಚಿನ ಪದಕದ ಜತೆ ಶ್ರೀಜೆಶ್ ಪೋಸ್

'ಆಹಾ ಎಂತಹ ಮುಂಜಾನೆ': ಕಂಚಿನ ಪದಕದ ಜತೆ ಶ್ರೀಜೆಶ್ ಪೋಸ್

Sampriya

ಪ್ಯಾರಿಸ್ , ಶುಕ್ರವಾರ, 9 ಆಗಸ್ಟ್ 2024 (16:03 IST)
Photo Courtesy X
ಪ್ಯಾರಿಸ್: ಇಲ್ಲಿ ಗುರುವಾರ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಕಂಚು ಗೆದ್ದು ಗೆಲುವಿನ ನಗೆ ಬೀರಿದೆ.  ಇನ್ನೂ ಈ ಗೆಲುವನ್ನು ಭಾರತದ ಹಾಕಿ ತಂಡದ ಆಟಗಾರರು ಕುಣಿದು ಸಂಭ್ರಮಿಸಿದ್ದಾರೆ.

ಈಗಾಗಲೇ ಅಂತರಾಷ್ಟ್ರೀಯ ಪಂದ್ಯಾವಳಿಗೆ ವಿದಾಯ ಹೇಳಿರುವ ಭಾರತದ ಪುರುಷರ ತಂಡದ ಗೋಲ್ ಕೀಪರ್ ಶ್ರೀಜೇಶ್‌ ಅವರು ಪದಕದ ಪಕ್ಕದಲ್ಲಿ ಮಲಗಿ, ನಗುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  ಆ ಫೋಟೋಗೆ Whataaaaaa Morning" ಎಂದು ಶೀರ್ಷಿಕೆ ನೀಡಿದ್ದಾರೆ.

ಗುರುವಾರ ಇಲ್ಲಿನ ಯವೆಸ್-ಡು-ಮನೋಯಿರ್ ಸ್ಟೇಡಿಯಂನಲ್ಲಿ ನಡೆದ ಸ್ಪೇನ್‌ ವಿರುದ್ಧದ ಕಂಚಿಕ ಪದಕದ ಸ್ಪರ್ಧೆಯಲ್ಲಿ ಭಾರತ 2- 1ಅಂತರದಲ್ಲಿ  ಜಯ ಸಾಧಿಸಿತು. ಗೆಲುವಿನ ಸಂಭ್ರಮದಲ್ಲಿ ಗೋಲ್‌ಕೀಪರ್‌ ಶ್ರೀಜೇಶ್ ಅವರನ್ನು ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಹೆಗಲ ಮೇಲೆ ಕೂರಿಸಿ ಮೆರವಣಿಗೆ ಮಾಡಿದ್ದಾರೆ. ಅದಲ್ಲದೆ ಶ್ರೀಜೆಶ್‌ ಅವರಿಗೆ ಪದಕದೊಂದಿಗೆ ವಿದಾಯವನ್ನು ನೀಡಿ ಹಾಕಿ ಆಟಗಾರರು ಸಂಭ್ರಮಿಸಿದ್ದಾರೆ.

2010 ರ ವಿಶ್ವಕಪ್‌ನಲ್ಲಿ ಚೊಚ್ಚಲ ಪ್ರವೇಶ ಮಾಡಿದ ಶ್ರೀಜೇಶ್ ಭಾರತಕ್ಕೆ ವಿವಿಧ ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಇದರಲ್ಲಿ 2014 ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ, ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಜಂಟಿ ವಿಜೇತ ತಂಡವಾದ ಜಕಾರ್ತ-ಪಾಲೆಂಬಾಂಗ್‌ನಲ್ಲಿ ಕಂಚಿನ ಪದಕ ಸೇರಿವೆ. 2018 ರಲ್ಲಿ, ಭುವನೇಶ್ವರದಲ್ಲಿ 2019 ರ FIH ಪುರುಷರ ಸರಣಿಯ ಫೈನಲ್‌ನಲ್ಲಿ ಚಿನ್ನದ ಪದಕ ವಿಜೇತ ತಂಡ ಮತ್ತು ಬರ್ಮಿಂಗ್ಹ್ಯಾಮ್ 2022 ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.

36 ವರ್ಷದ ಗೋಲ್ ಕೀಪರ್ ಶ್ರೀಜೇಶ್ ಅವರು  ಟೋಕಿಯೋ 2020 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಕಂಚು ತಂದುಕೊಡುವಲ್ಲಿ ಪ್ರಮುಖ ಪಾತ್ರರಾಗಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಜ್ಯಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ಪಾಕಿಸ್ತಾನದ ಅರ್ಶದ್ ನದೀಂ ಹಿನ್ನಲೆ ಮತ್ತು ನೀರಜ್ ಚೋಪ್ರಾ ಜೊತೆಗಿನ ಗೆಳೆತನ