Select Your Language

Notifications

webdunia
webdunia
webdunia
webdunia

ನಾನು ಕುಡಿಯುವ ನೀರಿಗೆ ಏನಾದ್ರೂ ಮಿಕ್ಸ್ ಮಾಡಿದ್ರೆ: ಆರು ತಿಂಗಳ ಹಿಂದೆಯೇ ಸಂಶಯ ವ್ಯಕ್ತಪಡಿಸಿದ್ದ ವಿನೇಶ್ ಫೋಗಟ್

Vinesh Phogat

Krishnaveni K

ನವದೆಹಲಿ , ಶುಕ್ರವಾರ, 9 ಆಗಸ್ಟ್ 2024 (09:15 IST)
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕುಸ್ತಿ ವಿಭಾಗದಲ್ಲಿ ಫೈನಲ್ ತನಕ ಬಂದು ತೂಕ ಹೆಚ್ಚಳ ಕಾರಣಕ್ಕೆ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ಆರು ತಿಂಗಳ ಹಿಂದೆಯೇ ನೀಡಿದ್ದ ಹೇಳಿಕೆಯೊಂದು ಈಗ ವೈರಲ್ ಆಗಿದೆ.

ವಿನೇಶ್ ಫೋಗಟ್ ಈ ಹಿಂದೆ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕಾಗಿ ಅವರು ಅನೇಕ ಧ್ವೇಷ ಕಟ್ಟಿಕೊಂಡಿದ್ದರು. ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವ ಮುನ್ನ ಅವರು ಒಂದು ವೇಳೆ ನಾನು ಒಲಿಂಪಿಕ್ಸ್  ನಲ್ಲಿ ನನ್ನ ಆಯ್ಕೆಯಾಗದಂತೆ ಅಥವಾ ಆಯ್ಕೆಯಾದರೆ ಪಂದ್ಯದ ಸಂದರ್ಭದಲ್ಲಿ ತಾನು ಕುಡಿಯುವ ನೀರಿಗೆ, ಆಹಾರಕ್ಕೆ ಏನಾದರೂ ಮಿಕ್ಸ್ ಮಾಡಿ ಅನರ್ಹಗೊಳ್ಳುವಂತೆ ಮಾಡಿದರೆ ಏನು ಮಾಡೋದು ಎಂದು ಸಂಶಯ ವ್ಯಕ್ತಪಡಿಸಿದ್ದರು.

ಸೆಮಿಫೈನಲ್ ನಲ್ಲಿ ವಿನೇಶ್ ಗೆದ್ದಾಗ ಹಲವರು ಬ್ರಿಜ್ ಭೂಷಣ್ ಆಂಡ್ ಗ್ಯಾಂಗ್ ಗೆ ತಕ್ಕ ಶಾಸ್ತಿಯಾಗಿದೆ ಎಂದು ಬೀಗಿದ್ದರು. ಅದರ ಬೆನ್ನಲ್ಲೇ ಅವರು ಫೈನಲ್ ಗೆ ಅನರ್ಹರಾಗಿರುವುದು ಎಲ್ಲರ ಅನುಮಾನಕ್ಕೆ ಕಾರಣವಾಗಿದೆ. ಹಲವರು ಬಹುಶಃ ಇದೇ ಕಾರಣಕ್ಕೇ ವಿನೇಶ್ ರನ್ನು ಬೇಕೆಂದೇ ಅನರ್ಹಗೊಳಿಸಲಾಯಿತೇ ಎಂದು ಅನುಮಾನ ವ್ಯಕ್ತಪಡಿಸಿದ್ದರು.

ಹೀಗಾಗಿ ಅಂದು ವಿನೇಶ್ ಅನುಮಾನ ವ್ಯಕ್ತಪಡಿಸಿ ನೀಡಿದ್ದ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಹುಶಃ ವಿನೇಶ್ ಗೆ ಮೊದಲೇ ಇದರ ಬಗ್ಗೆ ಸುಳಿವಿತ್ತು. ಆಕೆಗೆ ಸಹಾಯಕರಾಗಿ ಬಂದಿದ್ದ ತಂಡದಲ್ಲಿದ್ದವರು ಬ್ರಿಜ್ ಭೂಷಣ್ ಆಪ್ತರಿರಬಹುದು. ಅವರೇ ವಿನೇಶ್ ಅನರ್ಹರಾಗುವಂತೆ ಕುತಂತ್ರ ಮಾಡಿರಬಹುದು ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾರಿಸ್‌ನಲ್ಲಿ ಲಯ ತಪ್ಪಿದ ಚೋ‍ಪ್ರಾಗೆ ಕೈಜಾರಿದ ಚಿನ್ನ: ಭಾರತದ ಜಾವೆಲಿನ್‌ ತಾರೆಗೆ ಬೆಳ್ಳಿ ಕಿರೀಟ