Select Your Language

Notifications

webdunia
webdunia
webdunia
webdunia

ಪ್ರಜ್ಞಾನಂದ ಸಹೋದರಿಯ ಅಮೋಘ ಸಾಧನೆ: ವಿಶ್ವ ಚೆಸ್‌ ಬ್ಲಿಟ್ಜ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ

Grandmaster R. Vaishali

Sampriya

ನ್ಯೂಯಾರ್ಕ್ , ಬುಧವಾರ, 1 ಜನವರಿ 2025 (14:42 IST)
Photo Courtesy X
ನ್ಯೂಯಾರ್ಕ್: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌. ವೈಶಾಲಿ ಅವರು ಮಹಿಳಾ ವಿಶ್ವ ಬ್ಲಿಟ್ಜ್  ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ವಾಲ್‌ಸ್ಟ್ರೀಟ್‌ನಲ್ಲಿ ನಡೆದ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಭಾರತದ ವೈಶಾಲಿ, ಚೀನಾದ ಜು ವೆನ್‌ಜುನ್‌ ವಿರುದ್ಧ 0.5-2.5 ಅಂಕಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.

ಇದರೊಂದಿಗೆ ಫೈನಲ್‌ಗೇರುವ ಅವಕಾಶದಿಂದ ವಂಚಿತರಾದರೂ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಭಾಗದಲ್ಲಿ ಚೀನಾದ ಲೀ ಟಿಂಗ್ಜಿ ಅವರನ್ನು ಮಣಿಸಿದ ಜು ವೆನ್‌ಜುನ್‌ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ಈ ಮೊದಲು ಚೀನಾದವರೇ ಆದ ಝು ಜಿನರ್‌ ಅವರನ್ನು 2.5-1.5ರ ಅಂಕಗಳ ಅಂತರದಿಂದ ಮಣಿಸಿದ್ದ ವೈಶಾಲಿ, ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ್ದರು.

ವೈಶಾಲಿ ಅಮೋಘ ಸಾಧನೆಗೆ ಅಂತರರಾಷ್ಟ್ರೀಯ ಚೆಸ್ ಫೆಡರೇಷನ್ (ಫಿಡೆ) ಉಪಾಧ್ಯಕ್ಷ, ಐದು ಬಾರಿಯ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅವರು ಚೆಸ್‌ ವಿಶ್ವಕಪ್‌ನಲ್ಲಿ ಬೆಳ್ಳಿ ಗೆದ್ದ ಆರ್‌. ಪ್ರಜ್ಞಾನಂದ ಅವರ ಸಹೋದರಿಯಾಗಿದ್ದಾರೆ.

ಇದೀಗಷ್ಟೇ ಮಹಿಳಾ ವಿಶ್ವ ರ‍್ಯಾಪಿಡ್‌ ಚೆಸ್ ಚಾಂಪಿಯನ್‌ಷಿಪ್‌‌ನಲ್ಲಿ ಭಾರತದ ಕೊನೇರು ಹಂಪಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಆ ಮೂಲಕ 37 ವರ್ಷದ ಕೊನೇರು ಹಂಪಿ ಎರಡನೇ ಸಲ ರ‍್ಯಾಪಿಡ್‌ ಚೆಸ್ ಚಾಂಪಿಯನ್‌ಷಿಪ್‌‌ ಗೆದ್ದ ಸಾಧನೆ ಮಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಈಗ ಒಡೆದ ಮನೆ, ರೋಹಿತ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಿರಿಯ ಆಟಗಾರ