Select Your Language

Notifications

webdunia
webdunia
webdunia
webdunia

ಕಬಡ್ಡಿ ಅಂಗಳದಲ್ಲೇ ಕುಸಿದು ರಾಜ್ಯ ಮಟ್ಟದ ಆಟಗಾರ ಪ್ರೀತಮ್ ಶೆಟ್ಟಿ ಬಲಿ

Kabaddi player Pritam Shetty

Sampriya

ಉಡುಪಿ , ಶನಿವಾರ, 14 ಡಿಸೆಂಬರ್ 2024 (14:16 IST)
Photo Courtesy X
ಉಡುಪಿ: ಹೃದಯಾಘಾತಕ್ಕೆ ಯುವ ಪೀಳಿಗೆ ಬಲಿಯಾಗುತ್ತಿರುವ ಘಟನೆಗಳು ಹೆಚ್ಚುತ್ತಿರುವ ಬೆನ್ನಲ್ಲೇ  ಮತ್ತೊಂದು ಘಟನೆ ಮಂಡ್ಯದಲ್ಲಿ ನಡೆದಿದೆ. ರಾಜ್ಯ ಮಟ್ಟದ ಪ್ರತಿಭಾನ್ವಿತ ಕಬಡ್ಡಿ ಆಟಗಾರ ಮೃತಪಟ್ಟಿದ್ದಾರೆ.

ರಾಜ್ಯಮಟ್ಟದ ಕಬಡ್ಡಿ ಆಟಗಾರ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಟ್ಲುಪಾಡಿ ನಡುಮನೆ ನಿವಾಸಿ ಪ್ರೀತಮ್‌ ಶೆಟ್ಟಿ(26) ಹೃದಯಾಘಾತದಿಂದ ನಿಧನರಾಗಿದ್ದಾರೆ. ಶುಕ್ರವಾರ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಪಂದ್ಯಾವಳಿಯಲ್ಲಿ ಪ್ರೀತಮ್ ಭಾಗವಹಿಸಿದ್ದರು. ಈ ಪಂದ್ಯಾಟದ ನಡುವೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ.

ಎದೆ ನೋವಿನಿಂದ ಅಂಗಳದಲ್ಲೇ ಕುಸಿದು ಬಿದ್ದ ಅವರನ್ನು ಸಹ ಆಟಗಾರರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲಾಗಲೇ ಪ್ರೀತಮ್ ಶೆಟ್ಟಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕೆಲವೇ ದಿನಗಳಲ್ಲಿ ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳು ಸಿದ್ಧತೆಗಳನ್ನು ಪ್ರೀತಮ್‌ ಮಾಡಿಕೊಂಡಿದ್ದರು. ಆದರೆ ವಿಧಿಯಾಟ ಕಬಡ್ಡಿ ಅಂಗಳದಲ್ಲೇ ಯುವ ಆಟಗಾರ ತನ್ನ ಪ್ರಾಣಬಿಟ್ಟಿದ್ದಾರೆ. ಮೃತ ಪ್ರೀತಮ್ ಶೆಟ್ಟಿ ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.

ಕೆಲ ತಿಂಗಳುಗಳ ಹಿಂದೆಯಷ್ಟೇ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ್ದ ಕಬಡ್ಡಿ ಆಟಗಾರ ನಿರ್ಭಯ್ ಸಿಂಗ್ ಹಾತೂರ್ ಹೃದಯಾಘಾತದಿಂದ ನಿಧನರಾಗಿದ್ದರು. 35 ವರ್ಷದ ನಿರ್ಭಯ್ ಸಿಂಗ್ ಅತ್ಯುತ್ತಮ ಪ್ರದರ್ಶನಗಳೊಂದಿಗೆ ವಿದೇಶಗಳಲ್ಲೂ ತಮ್ಮ ಖ್ಯಾತಿ ವಿಸ್ತರಿಸಿದ್ದರು. ಅವರ ಬೆನ್ನಲ್ಲೇ ಪ್ರೀತಂ ನಿಧನ ಕ್ರೀಡಾವಲಯದಲ್ಲಿ ಭಾರೀ ಆಘಾತ ಉಂಟುಮಾಡಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

IND vs AUS: ಮಳೆಯ ಕಾಟಕ್ಕೆ ಪಂದ್ಯ ಸ್ಥಗಿತ, ಮೂರನೇ ಟೆಸ್ಟ್ ನಲ್ಲಿ ಯಾರೆಲ್ಲಾ ಇದ್ದಾರೆ