Select Your Language

Notifications

webdunia
webdunia
webdunia
webdunia

ನನ್ನ ತಪ್ಪಿನಿಂದ ರಾಷ್ಟ್ರಗೀತೆ ಮೊಳಗಲಿಲ್ಲ ಎಂದ ಕುಸ್ತಿಪಟು ಪೂಜಾಗೆ ಸಮಾಧಾನಿಸಿದ ಪ್ರಧಾನಿ ಮೋದಿ

ನನ್ನ ತಪ್ಪಿನಿಂದ ರಾಷ್ಟ್ರಗೀತೆ ಮೊಳಗಲಿಲ್ಲ ಎಂದ ಕುಸ್ತಿಪಟು ಪೂಜಾಗೆ ಸಮಾಧಾನಿಸಿದ ಪ್ರಧಾನಿ ಮೋದಿ
ನವದೆಹಲಿ , ಭಾನುವಾರ, 7 ಆಗಸ್ಟ್ 2022 (17:11 IST)
ನವದೆಹಲಿ: ಕಾಮನ್ ವೆಲ್ತ್ ಗೇಮ್ಸ್ ನ ಮಹಿಳೆಯ 50 ಕೆ.ಜಿ. ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡ ಪೂಜಾ ಗೆಹ್ಲೋಟ್ ಗೆ ಪ್ರಧಾನಿ ಮೋದಿ ಸಮಾಧಾನಿಸಿದ್ದಾರೆ.

ಕಂಚಿನ ಪದಕ ಗೆದ್ದ ಬಳಿಕ ಮಾತನಾಡಿದ್ದ ಪೂಜಾ ನಾನು ಈ ಮೂಲಕ ದೇಶದ ಕ್ಷಮೆ ಯಾಚಿಸಲು ಬಯಸುತ್ತೇನೆ. ನಾನು ಪ್ರಶಸ್ತಿ ಸ್ವೀಕರಿಸುವಾಗ ರಾಷ್ಟ್ರಗೀತೆ ಮೊಳಗಬೇಕು ಎಂದು ಬಯಸಿದ್ದೆ. ಆದರೆ ನನ್ನ ತಪ್ಪಿನಿಂದಾಗಿ ರಾಷ್ಟ್ರಗೀತೆ ಮೊಳಗಲಿಲ್ಲ. ಮುಂದಿನ ಬಾರಿ ಪ್ರದರ್ಶನ ಸುಧಾರಿಸಲು ಪ್ರಯತ್ನಿಸುವೆ ಎಂದಿದ್ದರು.

ಪೂಜಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ‘ಪೂಜಾ ನಿಮ್ಮ ಪದಕ ನಮಗೆಲ್ಲರಿಗೂ ಸಂಭ್ರಮ. ಕ್ಷಮೆ ಯಾಚಿಸಬೇಕಾಗಿಲ್ಲ. ನಿಮ್ಮ ಪಯಣ ನಮಗೆಲ್ಲಾ ಸ್ಪೂರ್ತಿ. ಮುಂದೆ ನಿಮಗೆ ಮತ್ತಷ್ಟು ಒಳಿತಾಗಲಿದೆ. ಹೀಗೇ ಸಾಧನೆ ಮಾಡುತ್ತಿರಿ’ ಎಂದಿದ್ದಾರೆ. ಪ್ರಧಾನಿ ಮೋದಿ ಕ್ರೀಡಾಳುವಿಗೆ ಈ ರೀತಿ ಸಮಾಧಾನಿಸಿದ್ದನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮನ್ ವೆಲ್ತ್ ಗೇಮ್ಸ್: ಟ್ರಿಪಲ್ ಜಂಪ್ ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನ