Select Your Language

Notifications

webdunia
webdunia
webdunia
webdunia

ಫೈನಲ್ ನಲ್ಲಿ ಸೋತರೂ ಭಾರತೀಯರಿಗೆ, ಸಿಂಧುಗೆ ಧನ್ಯವಾದ ಹೇಳಿದ ತೈಜು ಯಿಂಗ್!

ಫೈನಲ್ ನಲ್ಲಿ ಸೋತರೂ ಭಾರತೀಯರಿಗೆ, ಸಿಂಧುಗೆ ಧನ್ಯವಾದ ಹೇಳಿದ ತೈಜು ಯಿಂಗ್!
ಟೋಕಿಯೋ , ಸೋಮವಾರ, 2 ಆಗಸ್ಟ್ 2021 (10:03 IST)
ಟೋಕಿಯೋ: ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಫೈನಲ್ ತಲುಪಿದ್ದ ವಿಶ್ವ ನಂ.1 ಆಟಗಾರ್ತಿ ಚೈನೀಸ್ ತೈಪೆಯ ತೈಜು ಯಿಂಗ್ ಅಂತಿಮ ಪಂದ್ಯದಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
Photo Courtesy: Twitter


ಆದರೆ ಫೈನಲ್ ಸೋತ ಬಳಿಕ ತಮಗೆ ಪ್ರೋತ್ಸಾಹ ಕೊಟ್ಟ ಭಾರತೀಯ ತಾರೆ ಪಿ.ವಿ. ಸಿಂಧುವಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ. ಸೆಮಿಫೈನಲ್ ನಲ್ಲಿ ಸಿಂಧುವನ್ನು ಮಣಿಸಿದ್ದ ತಾರೆಗೆ ಆಗಲೇ ಆರೋಗ್ಯ ಕೈಕೊಟ್ಟಿತ್ತು. ಪದೇ ಪದೇ ಕೋಚ್ ತೈಜುಗೆ ಐಸ್ ಮಸಾಜ್ ಮಾಡುತ್ತಿದ್ದರು.

ಹಾಗಿದ್ದರೂ ಫೈನಲ್ ನಲ್ಲಿ ಮೂರು ಸೆಟ್ ಗಳವರೆಗೆ ಪಂದ್ಯ ಕೊಂಡೊಯ್ದು ಎದುರಾಳಿಗೆ ಕಠಿಣ ಪೈಪೋಟಿ ಕೊಟ್ಟ ತೈಜು ಪಂದ್ಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಒಳ್ಳೆಯ ಮಾತನಾಡಿದ ಭಾರತೀಯರು ಮತ್ತು ಪಿ.ವಿ. ಸಿಂಧುವಿಗೆ ಧನ್ಯವಾದ ಎಂದಿದ್ದಾರೆ. ಫೈನಲ್ ಸೋತ ಬಳಿಕ ನನ್ನನ್ನು ಅಪ್ಪಿಕೊಂಡ ಸಿಂಧು, ನಿಮಗೆ ಅನಾರೋಗ್ಯವಿದ್ದರೂ ಚೆನ್ನಾಗಿ ಆಡಿದಿರಿ. ಆದರೆ ಈವತ್ತು ನಿಮ್ಮ ದಿನವಾಗಿರಲಿಲ್ಲ. ಸಿಂಧು ನನ್ನನ್ನು ತೋಳಿನಲ್ಲಿ ಬಳಸಿ ಪ್ರೋತ್ಸಾಹಕರ ಮಾತನಾಡಿದಾಗ ನಿಜಕ್ಕೂ ಅಳುಬರುವಂತಾಯಿತು. ಸಾಕಷ್ಟು ಭಾರತೀಯರು ನನಗೆ ಪ್ರೀತಿ ತೋರಿದ್ದಾರೆ. ಅವರೆಲ್ಲರಿಗೂ ಧನ್ಯವಾದ’ ಎಂದು ತೈಜು ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸ್ಕಸ್ ಥ್ರೋ ಫೈನಲ್ ಇಂದು: ಕಮಲ್ ಪ್ರೀತ್ ಮೇಲೆ ಎಲ್ಲರ ಕಣ್ಣು