ಟೋಕಿಯೋ: ಮಹಿಳೆಯರ ಡಿಸ್ಕಸ್ ಥ್ರೋ ವಿಭಾಗದಲ್ಲಿ 64 ಮೀ. ದೂರ ಎಸೆದು ಎರಡನೇ ಸ್ಥಾನಿಯಾಗಿ ಫೈನಲ್ ಗೆ ಅರ್ಹತೆ ಪಡೆದಿದ್ದ ಭಾರತದ ಕಮಲ್ ಪ್ರೀತ್ ಇಂದು ಫೈನಲ್ ಆಡಲಿದ್ದಾರೆ.
ಚೊಚ್ಚಲ ಒಲಿಂಪಿಕ್ಸ್ ನಲ್ಲೇ 64 ಮೀ. ದೂರ ಎಸೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಕಮಲ್ ಇಂದು ಮತ್ತೆ ಅಂತಹದ್ದೇ ಅತ್ಯುತ್ತಮ ಪ್ರದರ್ಶನ ನೀಡಿ ಪದಕ ಗಳಿಸಿಕೊಡುತ್ತಾರೆ ಎಂಬ ನಿರೀಕ್ಷೆ ದೇಶವಾಸಿಗಳದ್ದು.
ಇಂದು ಸಂಜೆ ಭಾರತೀಯ ಕಾಲಮಾನ ಪ್ರಕಾರ 4.30 ಕ್ಕೆ ಈ ಪಂದ್ಯ ನಡೆಯಲಿದೆ. ಕಮಲ್ ಪ್ರೀತ್ ಸೇರಿದಂತೆ ಒಟ್ಟು 12 ಸ್ಪರ್ಧಿಗಳು ಕಣದಲ್ಲಿದ್ದಾರೆ.