ಟೋಕಿಯೋ: ಬರೋಬ್ಬರಿ 41 ವರ್ಷಗಳ ಬಳಿಕ ಮತ್ತೆ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಗೇರಿದ ಭಾರತ ಪುರುಷರ ಹಾಕಿ ತಂಡ ನಾಳೆ ಮಹತ್ವದ ಪಂದ್ಯವಾಡಲಿದೆ.
ನಾಳೆ ಬೆಲ್ಜಿಯಂ ವಿರುದ್ಧ ಭಾರತ ತಂಡ ಸೆಮಿಫೈನಲ್ ಪಂದ್ಯವಾಡಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಗಲಿದೆ.
1972 ರ ಬಳಿಕ ಇದೇ ಮೊದಲ ಬಾರಿಗೆ ಸೆಮಿಫೈನಲ್ ಗೇರಿರುವ ಭಾರತಕ್ಕೆ ನಾಳೆ ಪಂದ್ಯ ಗೆದ್ದರೆ ಪದಕ ಖಾತ್ರಿಯಾಗಲಿದೆ. ಒಂದು ವೇಳೆ ಸೋತರೆ ಮತ್ತೆ ಕಂಚಿನ ಪದಕಕ್ಕಾಗಿ ಪಂದ್ಯವಾಡಬೇಕಾಗಬಹುದು. ಆದರೆ ಭಾರತ ತಂಡ ಪ್ರಸಕ್ತ ಫಾರ್ಮ್ ಗಮನಿಸಿದರೆ ನಾಳೆ ಎದುರಾಳಿಗಳಿಗೆ ಕಠಿಣ ಪೈಪೋಟಿ ನೀಡುವುದು ಖಚಿತ.