Publish Date: Mon, 02 Aug 2021 (09:10 IST)
Updated Date: Mon, 02 Aug 2021 (09:12 IST)
ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಸತತ ಎರಡನೇ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಬಗ್ಗೆ ಅವರ ತಂದೆ ಪಿ.ವಿ. ರಮಣ ಇಂಟ್ರಸ್ಟಿಂಗ್ ವಿಚಾರ ಹೇಳಿದ್ದಾರೆ.
ಸೆಮಿಫೈನಲ್ ನಲ್ಲಿ ವಿಶ್ವ ನಂ.1 ಆಟಗಾರ್ತಿ ತೈ ಜು ಯಿಂಗ್ ವಿರುದ್ಧ ಸೋತಾಗ ಸಿಂಧು ತೀವ್ರ ಬೇಸರಗೊಂಡಿದ್ದರಂತೆ. ಈ ಬಾರಿ ಮತ್ತೆ ಫೈನಲ್ ಗೇರುವ ಕನಸು ಭಗ್ನವಾದಾಗ ಸಿಂಧು ತಂದೆಯ ಮುಂದೆ ಕಣ್ಣೀರು ಹಾಕಿದ್ದರಂತೆ.
ಆಗ ಆಕೆಗೆ ನಿನಗೆ ಇನ್ನೊಂದೇ ಅವಕಾಶವಿದೆ. ಕಳೆದು ಹೋಗಿದ್ದರ ಬಗ್ಗೆ ಚಿಂತಿಸಬೇಡ. ಕಂಚಿನ ಪದಕ ಗೆಲ್ಲು. ಮುಂದಿನ 2024 ರ ಪ್ಯಾರಿಸ್ ಒಲಿಂಪಿಕ್ಸ್ ಇನ್ನೂ ಸಾಕಷ್ಟು ಸಮಯವಿದೆ. ಆಗ ಸಾಧ್ಯವಾಗುತ್ತೋ ಇಲ್ಲವೋ. ಈಗಲೇ ಪದಕ ಗೆದ್ದು ಕನಸು ನನಸು ಮಾಡು ಎಂದು ಧೈರ್ಯ ತುಂಬಿದ್ದರಂತೆ. ತಂದೆಯ ಮಾತನ್ನು ಸಿಂಧು ಉಳಿಸಿಕೊಂಡಿದ್ದಾರೆ.