Select Your Language

Notifications

webdunia
webdunia
webdunia
webdunia

ಸಿಕ್ಕ ಚಾನ್ಸ್ ಮಿಸ್ ಮಾಡಿಕೊಂಡ ಟೀಂ ಇಂಡಿಯಾ ಯುವ ಬ್ಯಾಟ್ಸ್ ಮನ್ ಗಳು

ಸಿಕ್ಕ ಚಾನ್ಸ್ ಮಿಸ್ ಮಾಡಿಕೊಂಡ ಟೀಂ ಇಂಡಿಯಾ ಯುವ ಬ್ಯಾಟ್ಸ್ ಮನ್ ಗಳು
ಕೊಲೊಂಬೋ , ಸೋಮವಾರ, 2 ಆಗಸ್ಟ್ 2021 (08:50 IST)
ಕೊಲೊಂಬೋ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ದಿಗ್ಗಜರ ಅನುಪಸ್ಥಿತಿಯಲ್ಲಿ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ  ಟೀಂ ಇಂಡಿಯಾದ ಯುವ ಪಡೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲು ವಿಫಲವಾಗಿದೆ.


ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿ ಸರಣಿ ಗೆದ್ದರೂ, ಟಿ20 ಸರಣಿಯಲ್ಲಿ ಕೊನೆಯ ಎರಡು ಪಂದ್ಯಗಳಲ್ಲಿ ಅದೃಷ್ಟವಶಾತ್ ಅವಕಾಶ ಗಿಟ್ಟಿಸಿಕೊಂಡ ದೇವದತ್ತ್ ಪಡಿಕ್ಕಲ್, ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ ವಾಡ್, ನಿತೀಶ್ ರಾಣ ಅದನ್ನು ಬಳಸಿಕೊಳ್ಳಲು ವಿಫಲರಾಗಿದ್ದಾರೆ.

ಒಂದು ವೇಳೆ ಇವರು ಐಪಿಎಲ್ ನಲ್ಲಿ ಪ್ರದರ್ಶಿಸುತ್ತಿದ್ದ ಫಾರ್ಮ್ ಪ್ರದರ್ಶಿಸಿ ಆಡಿ ಟೀಂ ಇಂಡಿಯಾ ಗೆಲ್ಲುತ್ತಿದ್ದರೆ, ದ್ರಾವಿಡ್ ಪಡೆಗೆ ಹೆಗ್ಗಳಿಕೆ ಸಿಗುತ್ತಿತ್ತು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳದೇ ಈ ಯುವ ಕ್ರಿಕೆಟಿಗರು ತಮ್ಮನ್ನು ತಾವೇ ಹಳಿದುಕೊಳ್ಳುವಂತಾಗಿದೆ. ಆದರೆ ಒಂದೇ ಪ್ರದರ್ಶನದಿಂದ ಇವರನ್ನು ಅಳೆಯಲಾಗದು. ಅವರಿಗೂ ಸಮಯ ನೀಡಬೇಕಾಗುತ್ತದೆ ಎಂದು ಕೋಚ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಮತ್ತೆ ಇಂತಹ ಸುವರ್ಣಾವಕಾಶ ಸಿಗುವವರೆಗೂ ಈ ಯುವ ಕ್ರಿಕೆಟಿಗರು ಕಾಯಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೋಕಿಯೊ ಒಲಿಂಪಿಕ್ಸ್: ಗೆದ್ದ ಸಂಭ್ರಮದಲ್ಲಿ ಬಾಕ್ಸರ್ ಗೆ ಗಾಯ; ಸೋತ ಬಾಕ್ಸರ್ ಫೈನಲ್ ಗೆ!