ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಸಂಘಟಕರು ಮಕ್ಕಳಿಗೆ 2 ಲಕ್ಷ ಟಿಕೆಟ್‌ಗಳನ್ನು ಉಚಿತವಾಗಿ ಹಂಚಲಿದೆ ಎಂದು ರಿಯೋ 2016 ಸಂಘಟನಾ ಸಮಿತಿ ಸಂಪರ್ಕ ಎಕ್ಸಿಕ್ಯೂಟಿವ್ ನಿರ್ದೇಶಕ ಮಾರಿಯೊ ಆಂಡ್ರಾಡಾ ಪ್ರಕಟಿಸಿದರು. ಸುಮಾರು 65,000 ಟಿಕೆಟ್‌ಗಳು ಬುಧವಾರ ಮಾರಾಟವಾಗಿವೆ.
ಸುಮಾರು ಶೇ. 79ರಷ್ಟು ಟಿಕೆಟ್‌ಗಳನ್ನು ಮಂಗಳವಾರದವರೆಗೆ ಮಾರಾಟ ಮಾಡಲಾಗಿದೆ ಎಂದು ಆಂಡ್ರಾಡಾ ತಿಳಿಸಿದರು. ವಿವಿಧ ಪ್ರಾಜೆಕ್ಟ್‌ಗಳಲ್ಲಿ ವಿವಿಧ ಪ್ರದೇಶಗಳಲ್ಲಿ 2,40,000 ಮಕ್ಕಳಿದ್ದಾರೆ.
ನಾವು ಎಲ್ಲಾ ದುಬಾರಿ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದು, ಇನ್ನಷ್ಟು ಟಿಕೆಟ್‌ಗಳನ್ನು ನೀಡಲು ಸಾಧ್ಯವಾಗಲಿದೆ ಎಂದು ಆಂಡ್ರಾಡಾ ತಿಳಿಸಿದರು. 2016ರ ಒಲಿಂಪಿಕ್ಸ್ ಬ್ರೆಜಿಲ್ ರಿಯೋ ಡಿ ಜನೈರೊನಲ್ಲಿ ಆಗಸ್ಟ್ 5ರಿಂದ 21ರವರೆಗೆ ನಡೆಯಲಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ