ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ 3ನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಸೊಹೇಲ್ ಖಾನ್ ಅವರ ಮಾರಕ ಬೌಲಿಂಗ್ ದಾಳಿಗೆ ಇಂಗ್ಲೆಂಡ್ 297 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಎರಡನೇ ಟೆಸ್ಟ್‌ನಲ್ಲಿ ಅಲಸ್ಟೈರ್ ಕುಕ್ ಮತ್ತು ಜೋಯ್ ರೂಟ ಜತೆಯಾಟದಿಂದ ಇಂಗ್ಲೆಂಡ್ ಬೃಹತ್ ಸ್ಕೋರನ್ನು ದಾಖಲಿಸಿ ಜಯಗಳಿಸಿತ್ತು.
ಆದರೆ ಈ ಬಾರಿ ಎಚ್ಚರಿಕೆ ವಹಿಸಿದ್ದ ಪಾಕಿಸ್ತಾನ ಬೌಲರುಗಳು ರೂಟ್ ಮತ್ತು ಕುಕ್ ಅವರನ್ನು ಬೇಗನೇ ಔಟ್ ತೆಗೆದಿದ್ದರಿಂದ ಇಂಗ್ಲೆಂಡ್ ಬೃಹತ್ ಸ್ಕೋರು ದಾಖಲಿಸುವುಕ್ಕೆ ಪಾಕ್ ಕಡಿವಾಣ ಹಾಕಿತು. ಕುಕ್ ಅವರು 45 ರನ್ ಸ್ಕೋರ್ ಮಾಡಿ ರಾಹತ್ ಅಲಿಗೆ ಎಲ್‌ಬಿಡಬ್ಲ್ಯುಗೆ ಬಲಿಯಾದರು.
ರೂಟ್ 3 ರನ್ ಸ್ಕೋರ್ ಮಾಡಿದ್ದಾಗ ಸೊಹೇಲ್ ಖಾನ್ ಎಸೆತದಲ್ಲಿ ಹಫೀಜ್‌ಗೆ ಕ್ಯಾಚಿತ್ತು ಔಟಾದರು. ಸೊಹೇಲ್ ಖಾನ್ ಐದು ವರ್ಷಗಳ ಅನುಪಸ್ಥಿತಿ ಬಳಿಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 23 ಓವರುಗಳಲ್ಲಿ 96 ರನ್ ನೀಡಿ ಐದು ವಿಕೆಟ್ ಗಳಿಸಿದರು.
ಸ್ಕೋರು ವಿವರ
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್
297ಕ್ಕೆ 10 ವಿಕೆಟ್
ಅಲಸ್ಟೈರ್ ಕುಕ್ 45, ಅಲೆಕ್ಸ್ ಹೇಲ್ಸ್ 17, ಜೇಮ್ಸ್ ವಿನ್ಸ್ 39, ಗ್ಯಾರಿ ಬ್ಯಾಲೆನ್ಸ್ 70, ಮೊಯಿನ್ ಅಲಿ 63
ವಿಕೆಟ್ ಪತನ
5-1 (ರಾಜೇಂದ್ರ ಚಂದ್ರಿಕಾ, 2.3), 41-2 (ಕ್ರೈಗ್ ಬ್ರಾಥ್ವೈಟ್, 12.6), 41-3 (ಮರ್ಲಾನ್ ಸ್ಯಾಮುಯೆಲ್ಸ್, 13.5), 48-4 (ಡ್ಯಾರೆನ್ ಬ್ರಾವೊ, 15.5), 141-5 (ಜರ್ಮೈನ್ ಬ್ಲ್ಯಾಕ್ 33.3), 285-6 (ಶೇನ್ ಡೌರ್ವಿಕ್ 71.4)
ಬೌಲಿಂಗ್ ವಿವರ
ಮೊಹಮ್ಮದ್ ಅಮಿರ್ 2 ವಿಕೆಟ್, ಸೊಹೇಲ್ ಖಾನ್ 5 ವಿಕೆಟ್, ರಾಹತ್ ಅಲಿ 2 ವಿಕೆಟ್ , ಯಾಸಿರ್ ಶಾಹ್ 1 ವಿಕೆಟ್.