ಯಾವುದೇ ಕ್ರೀಡೆ ರೀತಿಯಲ್ಲಿ ಕ್ರಿಕೆಟ್‌ನಲ್ಲಿ ಕೂಡ ಅನೇಕ ದೈಹಿಕ ಅಪಾಯಗಳಿಗೆ ಗುರಿಯಾಗುವ ಸಾಧ್ಯತೆಯಿರುತ್ತದೆ. ಬೌಲರ್ ಎಸೆದ ಬೌನ್ಸರ್ ಬ್ಯಾಟ್ಸ್‌ಮನ್‌ನನ್ನು ಕೆಳಕ್ಕೆ ಉರುಳಿಸುವ ಚಿಂತೆ ಕಾಡಬಹುದು. ಈಗ ಕ್ರೀಡಾಸಾಮಗ್ರಿಗಳಲ್ಲಿ ಸುಧಾರಣೆಯಾಗಿದ್ದರೂ ಫಿಲ್ ಹ್ಯೂಸ್ ಮುಂತಾದ ಪ್ರಕರಣಗಳು ಕ್ರಿಕೆಟ್ ಜಗತ್ತನ್ನು ಕಾಡಿದೆ.
ಕ್ರಿಕೆಟ್ ಫೀಲ್ಡ್‌ನಲ್ಲಿ ಪರಸ್ಪರ ಆಟಗಾರರು ಅಪಾಯಕಾರಿಯಾಗಿ ಘರ್ಷಿಸುವುದನ್ನು ಕಂಡಿದ್ದೇವೆ. ಕ್ರಿಕೆಟ್ ಗ್ರೇಟ್ ವಿರಾಟ್ ಕೊಹ್ಲಿ ಮಿರ್‌ಪುರದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರಿಗೆ ಮುಖಾಮುಖಿ ಡಿಕ್ಕಿಹೊಡೆದ ಘಟನೆ ಸಂಭವಿಸಿತ್ತು.
38ನೇ ಓವರಿನಲ್ಲಿ ಉಮರ್ ಅಕ್ಮಲ್ ಅಶ್ವಿನ್ ಎಸೆತವನ್ನು ಸ್ಕ್ವೇರ್ ಲೆಗ್ ಕಡೆಗೆ ಹೊಡೆದರು. ಕೊಹ್ಲಿ ಡೀಪ್ ಮಿಡ್‌ವಿಕೆಟ್‌ನಿಂದ ಮತ್ತು ರೋಹಿತ್ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್‌ಲೆಗ್‌ನಿಂದ ಚೆಂಡಿನ ಹಿಂದೆ ಓಡಿ ಬ್ಯಾಟ್ಸ್‌ಮನ್ 2ನೇ ರನ್ ಕದಿಯುವುದನ್ನು ತಡೆಯಲು ಯತ್ನಿಸಿದರು. ಆದರೆ ಆಗಿದ್ದೇನು, ಇಬ್ಬರು ಮುಖಾಮುಖಿ ಡಿಕ್ಕಿಯಾಗಿ ಕೆಳಕ್ಕೆ ಕುಸಿದು ಬಿದ್ದಿದ್ದರು. ಮುಂದೆ ಆಗಿದ್ದೇನು, ವಿಡಿಯೊ ವೀಕ್ಷಿಸಿ.