ನವದೆಹಲಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಜ್ವಾವೆಲಿನ್ ಥ್ರೋ ವಿಭಾಗದಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದು ದಾಖಲೆ ಮಾಡಿದ್ದಾರೆ.
ಒಟ್ಟು 88.13 ಮೀ. ದೂರ ಎಸೆದ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಅಂಜು ಬಾಬ್ಬಿ ಜಾರ್ಜ್ ಬಳಿಕ ಪದಕ ಗೆದ್ದ ಕೇವಲ ಎರಡನೇ ಭಾರತೀಯ ಎಂಬ ದಾಖಲೆ ಮಾಡಿದ್ದಾರೆ.
90.54 ಮೀ. ದೂರ ಎಸೆದ ಗ್ರೆನೆಡಾಸ್ ನ ಆಂಡರ್ಸನ್ ಪೀಟರ್ಸ್ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಅವರು ಹಾಲಿ ಚಾಂಪಿಯನ್ ಆಗಿದ್ದರು.