Publish Date: Sun, 25 Jul 2021 (09:10 IST)
Updated Date: Sun, 25 Jul 2021 (09:24 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನ ಮೊದಲ ದಿನವೇ ವೈಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಗೆದ್ದ ಭಾರತದ ಮೀರಾಬಾಯಿ ಚಾನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮಗೆ ವಿಶ್ ಮಾಡಿದವರಿಗೆಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.
ತಮ್ಮ ಸಾಧನೆಯನ್ನು ದೇಶಕ್ಕೇ ಅರ್ಪಿಸಿದ ಚಾನು, ಇದು ತನ್ನ ಕೋಚ್, ಕುಟುಂಬ, ಸ್ನೇಹಿತರ ತ್ಯಾಗದ ಫಲ ಎಂದಿದ್ದಾರೆ. ಅಲ್ಲದೆ, ತಮಗೆ ವಿಶ್ ಮಾಡಿರುವುದಕ್ಕೆ ಅಭಾರಿಯಾಗಿದ್ದೇನೆ ಎಂದಿದ್ದಾರೆ.
ಸುದೀರ್ಘ ಸಂದೇಶ ಬರೆದಿರುವ ಚಾನು, ತಮ್ಮ ಜೊತೆಗೆ ಈ ಪ್ರಯಾಣದಲ್ಲಿ ಜೊತೆಯಾದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ. ಅಲ್ಲದೇ ತಮ್ಮ ವೃತ್ತಿ ಜೀವನಕ್ಕೆ ಸಹಾಯ ಮಾಡಿದವರನ್ನು ಸ್ಮರಿಸಿದ್ದಾರೆ.