ಟೋಕಿಯೋ: ಒಲಿಂಪಿಕ್ಸ್ ನ ಮೊದಲ ದಿನವೇ ಭಾರತಕ್ಕೆ ಪದಕ ಒಲಿದುಬಂದಿದೆ. ಇದೀಗ ತಾನೇ ನಡೆದ ವನಿತೆಯರ 49 ಕೆ.ಜಿ. ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಮೀರಾ ಬಾಯಿ ಚಾನು ಬೆಳ್ಳಿ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದಾರೆ.
ಚೀನಾದ ಹೌ ಚಿನ್ನದ ಪದಕ ಗೆದ್ದರೆ, ಭಾರತದ ಮೀರಾ ಬಾಯಿ ಚಾನು ಒಟ್ಟು 202 ಕೆ.ಜಿ. ಭಾರ ಎತ್ತುವ ಮೂಲಕ ಬೆಳ್ಳಿ ತಮ್ಮದಾಗಿಸಿಕೊಂಡರು. ಈ ಮೂಲಕ ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಕರ್ಣಂ ಮಲ್ಲೇಶ್ವರಿ ಬಳಿಕ ಒಲಿಂಪಿಕ್ಸ್ ಪದಕ ಗೆದ್ದು ಇತಿಹಾಸ ನಿರ್ಮಿಸಿದರು.
ಇದಕ್ಕೂ ಮೊದಲು ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದರು. ಆ ದಾಖಲೆಯನ್ನು ಉತ್ತಮಗೊಳಿಸಿರುವ ಮೀರಾ ಬಾಯಿ ಚಾನು ಬೆಳ್ಳಿ ಬೇಟೆಯಾಡಿದರು.