Publish Date: Sat, 24 Jul 2021 (10:24 IST)
Updated Date: Sat, 24 Jul 2021 (10:24 IST)
ನವದೆಹಲಿ: ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಅಥ್ಲೆಟ್ ಗಳ ಪಥಸಂಚಲನವನ್ನು ಟಿವಿಯಲ್ಲಿ ವೀಕ್ಷಿಸಿದ ಪ್ರಧಾನಿ ಮೋದಿ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ್ದಾರೆ.
ಪಥ ಸಂಚಲನದ ನೇರಪ್ರಸಾರವನ್ನು ತಮ್ಮ ಕಾರ್ಯಾಲಯದಲ್ಲಿ ಕುಳಿತು ವೀಕ್ಷಿಸಿದ ಪ್ರಧಾನಿ ಮೋದಿ, ಭಾರತೀಯ ಕ್ರೀಡಾಪಟುಗಳು ಆಗಮಿಸುತ್ತಿದ್ದಂತೇ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.
ಇನ್ನು, ಈ ನೇರಪ್ರಸಾರವನ್ನು ವೀಕ್ಷಿಸಿರುವ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಕೂಡಾ ಭಾರತ ತಂಡಕ್ಕೆ ಜೈಕಾರ ಕೂಗಿದ್ದಾರೆ.