Publish Date: Sat, 24 Jul 2021 (09:16 IST)
Updated Date: Sat, 24 Jul 2021 (09:18 IST)
ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶಿಖರ್ ಧವನ್ ಕೊನೆಗೂ ಟಾಸ್ ಗೆದ್ದರು.
ಈ ಸಂಭ್ರಮವನ್ನು ಅವರು ಪಂದ್ಯ ಗೆದ್ದ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ತಮ್ಮ ಶೈಲಿಯಲ್ಲೇ ತೊಡೆ ತಟ್ಟಿ, ಡ್ರೆಸ್ಸಿಂಗ್ ರೂಂ ಕಡೆಗ ಕೈ ಎತ್ತಿ ತೋರಿಸಿ ತಾವು ಟಾಸ್ ವಿನ್ ಆದ ಖುಷಿ ಅನುಭವಿಸಿದ್ದಾರೆ.
ವಿಶೇಷವೆಂದರೆ ಟೀಂ ಇಂಡಿಯಾಗೆ ಮೊದಲ ಬಾರಿಗೆ ನಾಯಕರಾಗಿರುವ ಧವನ್ ಕಳೆದ ಎರಡೂ ಪಂದ್ಯಗಳಲ್ಲಿ ಟಾಸ್ ಸೋತಿದ್ದರು. ನಿನ್ನೆ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತ್ತು.