Publish Date: Sun, 25 Jul 2021 (09:00 IST)
Updated Date: Sun, 25 Jul 2021 (09:17 IST)
ಕೊಲೊಂಬೋ: ಏಕದಿನ ಸರಣಿಯಲ್ಲಿ ದಿಗ್ವಿಜಯ ಸಾಧಿಸಿದ ಬಳಿಕ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಇಂದಿನಿಂದ ಲಂಕಾ ವಿರುದ್ಧ ಕಿರು ಮಾದರಿಯ ಕ್ರಿಕೆಟ್ ಆಡಲು ಸಜ್ಜಾಗಿದೆ.
ಇಂದಿನಿಂದ ಟಿ20 ಕ್ರಿಕೆಟ್ ಸರಣಿ ಆರಂಭವಾಗಲಿದ್ದು, ಇಂದು ಮೊದಲ ಪಂದ್ಯ ನಡೆಯುತ್ತಿದೆ. ಏಕದಿನ ಪಂದ್ಯದಲ್ಲಿ ಅವಕಾಶ ಸಿಗದ ಯುವ ಕ್ರಿಕೆಟಿಗರಿಗೆ ಈ ಸರಣಿಯಲ್ಲಿ ಅವಕಾಶ ಸಿಗುವ ಸಾಧ‍್ಯತೆಯಿದೆ. ಮೂಲಗಳ ಪ್ರಕಾರ ದೇವದತ್ತ್ ಪಡಿಕ್ಕಲ್ ಟಿ20 ಯಲ್ಲಿ ಆರಂಭಿಕರಾಗಿ ಕಣಕ್ಕಿಳಿಯಬಹುದು. ಐಪಿಎಲ್ ನಲ್ಲಿ ಅತ್ಯುತ್ತಮ ಆರಂಭಿಕ ಎಂದು ಪ್ರೂವ್ ಮಾಡಿರುವ ಅವರಿಗೆ ಟಿ20 ಯಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ.
ಇನ್ನು, ನಾಯಕ ಶಿಖರ್ ಧವನ್ ಗೂ ಟಿ20 ವಿಶ್ವಕಪ್ ಗೆ ಮೊದಲು ಚುಟುಕು ಮಾದರಿ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಇದು ಅತ್ಯುತ್ತಮ ಅವಕಾಶವಾಗಿದೆ. ಇಂದಿನ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.