ಟೋಕಿಯೋ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಒಲಿಂಪಿಕ್ಸ್ ನ ಮಹಿಳಾ ಸಿಂಗಲ್ಸ್ ನಲ್ಲಿ ಮೊದಲ ಪಂದ್ಯವನ್ನೇ ಗೆದ್ದು ಶುಭಾರಂಭ ಮಾಡಿದ್ದಾರೆ.
ಇಂದು ನಡೆದ ಪಂದ್ಯದಲ್ಲಿ ಇಸ್ರೇಲ್ ನ ಪೊಲಿಕರ್ಪೋವಾ ವಿರುದ್ಧ ಸಿಂಧು 21-7-21-10 ಅಂತರದಿಂದ ಗೆಲುವು ಸಾಧಿಸಿದರು. ಕೇವಲ 29 ನಿಮಿಷಗಳಲ್ಲಿ ಸಿಂಧು ಎದುರಾಳಿಯನ್ನು ಸೋಲಿಸಿ ತಮ್ಮ ಪ್ರಾಬಲ್ಯ ಸಾರಿದರು.
ಸಿಂಧು ಕಳೆದ ಬಾರಿ ಮಹಿಳಾ ಸಿಂಗಲ್ಸ್ ಫೈನಲ್ಸ್ ತಲುಪಿ ಬೆಳ್ಳಿ ಗೆದ್ದಿದ್ದರು. ಈ ಬಾರಿ ಚಿನ್ನ ಗೆಲ್ಲುವ ನಿರೀಕ್ಷೆಯಿದೆ. ಅವರ ಮೇಲೆ ಭಾರತೀಯರಿಗೆ ಅಪಾರ ನಿರೀಕ್ಷೆಯಿದ್ದು, ಆರಂಭದಲ್ಲೇ ಸುಲಭವಾಗಿ ಎದುರಾಳಿಯನ್ನು ಸೋಲಿಸುವ ಮೂಲಕ ತಮ್ಮ ಮೇಲಿನ ನಿರೀಕ್ಷೆ ಹಸಿರಾಗಿಟ್ಟಿದ್ದಾರೆ.