Publish Date: Mon, 26 Jul 2021 (09:34 IST)
Updated Date: Mon, 26 Jul 2021 (09:36 IST)
ಟೋಕಿಯೋ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಂದು ಮಹಿಳೆಯರ ಸಿಂಗಲ್ಸ್ ಟೇಬಲ್ ಟೆನಿಸ್ ಪಂದ್ಯದಲ್ಲಿ ಭಾರತದ ಮಣಿಕ್ ಬಾತ್ರಾ ಮೂರನೇ ಸುತ್ತಿನ ಪಂದ್ಯವಾಡಲಿದ್ದಾರೆ.
ಮಣಿಕ್ ಬಾತ್ರಾ ಕಳೆದ ಎರಡೂ ಪಂದ್ಯಗಳಲ್ಲಿ ಎದುರಾಳಿಯ ವಿರುದ್ಧ ಹೋರಾಡಿದ ರೀತಿ ನೋಡಿ ಇಂದಿನ ಪಂದ್ಯದಲ್ಲಿ ಅವರ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸಿಂಗಲ್ಸ್ ನಲ್ಲಿ ಪದಕದ ಆಸೆ ಚಿಗುರಿಸಿರುವ ಮಣಿಕ್ ಬಾತ್ರಾ ಇಂದು ಯಾವ ರೀತಿ ಆಡುತ್ತಾರೋ ಕಾದು ನೋಡಬೇಕು.
ಇಂದಿನ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾದ ಸೋಫಿಯಾ ಪೊಲ್ಕಾನೋವಾ ವಿರುದ್ಧ ಆಡಲಿದ್ದಾರೆ. ಈ ಪಂದ್ಯ ಮಧ್ಯಾಹ್ನ 01.00 ಗಂಟೆಗೆ ನಡೆಯಲಿದೆ.