Publish Date: Mon, 26 Jul 2021 (09:00 IST)
Updated Date: Mon, 26 Jul 2021 (09:49 IST)
ಟೋಕಿಯೋ: ಟೇಬಲ್ ಟೆನಿಸ್ ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಶರತ್ ಕಮಲ್ ಪೋರ್ಚುಗಲ್ ನ ಟಿ. ಅಪೊಲೊನಿಯಾ ವಿರುದ್ಧ 4-2 ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇಂದು ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಶರತ್ ಕಮಲ್ ಮೊದಲ ಸೆಟ್ ನಲ್ಲಿ ಎದುರಾಳಿಯಿಂದ ತೀವ್ರ ಪೈಪೋಟಿ ಎದುರಿಸಿದರು. ಎರಡನೇ ಸೆಟ್ ನಲ್ಲಿ ತಮ್ಮ ಅನುಭವವನ್ನೆಲ್ಲಾ ಒಗ್ಗೂಡಿಸಿ ಆಡಿದ ಶರತ್ ಗೆಲುವು ಸಾಧಿಸಿದರು.
ಇದರೊಂದಿಗೆ ಅವರೀಗ ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಮೂರನೇ ಸುತ್ತಿನಲ್ಲಿ ಚೀನಾದ ಮಾ ಲಾಂಗ್ ವಿರುದ್ಧ ಸೆಣಸಲಿದ್ದಾರೆ. ಈ ಪಂದ್ಯ ನಾಳೆ ಬೆಳಿಗ್ಗೆ 6.30 ಕ್ಕೆ ನಡೆಯಲಿದೆ.